ನವದೆಹಲಿ:ಏಕದಿನ ವಿಶ್ವಕಪ್ ಕ್ರಿಕೆಟ್‌ನ ಇಂದಿನ ಪಂದ್ಯದಲ್ಲಿಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ಥಾನದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದರು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ಪ್ರದರ್ಶನದಿಂದ ಅಫ್ಘಾನ್ ತಂಡ 284 ರನ್ ಕಲೆಹಾಕಿತು. ಆರಂಭಿಕರು ಮತ್ತು ಕೆಳ ಕ್ರಮಾಂಕದ ಪ್ರದರ್ಶನದ ಹೊರತಾಗಿ 49.5 ಓವರ್ಗಳಿಗೆ ಅಫ್ಘನ್ ಸರ್ವಪತನ ಕಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದ ವೈಫಲ್ಯ ಕಂಡು ಬಂತು. ಕೆಳ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದು ತಂಡ 300ರ ಗಡಿ ಸಮೀಪಿತು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದೊಡ್ಡ ಅಂತರದ ಸೋಲುಂಡ ಇಂಗ್ಲೆಂಡ್‌ಗೆ ರನ್ರೇಟ್ ಚೇತರಿಕೆಗೆ ಭರ್ಜರಿ ಪ್ರದರ್ಶನದ ಗೆಲುವು ಬೇಕಿದೆ.
ಅಫ್ಘಾನಿಸ್ತಾನದಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು. ಗುರ್ಬಾಜ್ ಅಬ್ಬರದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ಹೊಸ ಬಾಲ್ನಲ್ಲಿ ದೆಹಲಿ ಪಿಚ್ನಲ್ಲಿ ಆಂಗ್ಲ ವೇಗಿಗಳ ಬೌಲಿಂಗ್ ಪರಿಣಾಮ ಬೀರಲಿಲ್ಲ. ಇದನ್ನು ಲಾಭವಾಗಿ ಬಳಸಿಕೊಂಡ ಯುವ ಆಟಗಾರ ಗುರ್ಬಾಜ್ ಬೌಂಡರಿ, ಸಿಕ್ಸ್ರ್ಗಳ ಮೂಲಕ ರನ್ ಕದಿಯಲು ಪ್ರಾರಂಭಿಸಿದರು. ಮೊದಲ ಪವರ್ ಪ್ಲೇ ಮುಕ್ತಾಯಕ್ಕೆ ಅಫ್ಘಾನ್ ಶೂನ್ಯ ವಿಕೆಟ್ ನಷ್ಟಕ್ಕೆ 79 ರನ್ಗಳ ಪಾಲದಾರಿಕೆ ಮಾಡಿತು. ಇದು ವಿಶ್ವಕಪ್ನಲ್ಲಿ 10 ಓವರ್ಗೆ ಅಫ್ಘಾನ್ ಗಳಿಸಿದ ಬೃಹತ್ ಮೊತ್ತ.
ಶತಕದ ಜೊತೆಯಾಟ: ಆರಂಭಿಕ ಈ ಜೋಡಿ ಮುಂದುವರೆದು ಶತಕದ ಜೊತೆಯಾಟ ಆಚರಿಸಿಕೊಂಡಿತು. ಗುರ್ಬಾಜ್ ಒಂದೆಡೆ ಅಬ್ಬರದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರೆ, ಜದ್ರಾನ್ ಸಾಥ್ ನೀಡಿದರು. ಈ ವೇಳೆ ಇಂಗ್ಲೆಂಡ್ನ ಟಾಪ್ ಕ್ಲಾಸ್ ಬೌಲರ್ ಆದಿಲ್ ರಶೀದ್ ಫಿರೋಜ್ ಶಾ ಕೋಟ್ಲಾ ಪಿಚ್ನಲ್ಲಿ ತಮ್ಮ ಕೈಚಳಕ ತೋರಿದರು. 114 ರನ್ಗಳ ಜೊತೆಯಾಡುತ್ತಿದ್ದಾಗ ಜದ್ರಾನ್ (28) ವಿಕೆಟ್ ಪಡೆದು ಜೊತೆಯಾಟವನ್ನು ಆದಿಲ್ ರಶೀದ್ ಬ್ರೇಕ್ ಮಾಡಿದರು. ಜದ್ರಾನ್ ಬೆನ್ನಲ್ಲೇ ರಹಮತ್ ಶಾ (3) ಸಹ ಆದಿಲ್ ರಶೀದ್ಗೆ ವಿಕೆಟ್ ಕೊಟ್ಟರು.