ದುಬೈ :ಪಾಕಿಸ್ತಾನದ ಯುವ ವೇಗಿ ಶಾಹೀನ್ ಶಾ ಆಫ್ರಿದಿ '2021ರ ಐಸಿಸಿ ಪುರುಷ ಕ್ರಿಕೆಟಿಗ ಪ್ರಶಸ್ತಿ'ಗೆ ಭಾಜನವಾಗಿದ್ದಾರೆ. ಈ ಮೂಲಕ ಈ ವರ್ಷ ಐಸಿಸಿ ಪ್ರಶಸ್ತಿ ಗೆದ್ದ ಪಾಕಿಸ್ತಾನದ 4ನೇ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಗೆ ಶಾಹೀನ್ ಆಫ್ರಿದಿ ಸೇರಿದಂತೆ ಜೋ ರೂಟ್, ಮೊಹಮ್ಮದ್ ರಿಜ್ವಾನ್ ಮತ್ತು ಕೇನ್ ವಿಲಿಯಮ್ಸ್ ನಾಮ ನಿರ್ದೇಶನಗೊಂಡಿದ್ದರು. ಆದರೆ, ಮೂರು ಮಾದರಿಯಲ್ಲೂ ಅದ್ಭುತ ಪ್ರದರ್ಶನ ತೋರಿರುವ ಶಾಹೀನ್ ಸರ್ ಗ್ಯಾರಿ ಸೋಬರ್ಸ್ ಪ್ರಶಸ್ತಿ ಪಡೆದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶಾಹೀನ್ ಆಫ್ರಿದಿ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 78 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 47 ಹಾಗೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ 31 ವಿಕೆಟ್ ಪಡೆದಿದ್ದಾರೆ.
2021ರ ಐಸಿಸಿ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
- ಐಸಿಸಿ ವರ್ಷದ ಪುರುಷ ಕ್ರಿಕೆಟರ್: ಶಾಹೀನ್ ಅಫ್ರಿದಿ(ಪಾಕಿಸ್ತಾನ)
- ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್: ಸ್ಮೃತಿ ಮಂಧಾನ(ಭಾರತ)
- ಐಸಿಸಿ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ: ಮೊಹಮ್ಮದ್ ರಿಜ್ವಾನ್(ಪಾಕಿಸ್ತಾನ)
- ಐಸಿಸಿ ವರ್ಷದ ಮಹಿಳಾ ಟಿ20 ಕ್ರಿಕೆಟರ್: ಟಮ್ಮಿ ಬ್ಯೂಮಾಂಟ್(ಇಂಗ್ಲೆಂಡ್)
- ಐಸಿಸಿ ವರ್ಷದ ಪುರುಷ ಏಕದಿನ ಕ್ರಿಕೆಟರ್: ಬಾಬರ್ ಅಜಮ್(ಪಾಕಿಸ್ತಾನ)
- ಐಸಿಸಿ ವರ್ಷದ ಮಹಿಳಾ ಏಕಿದನ ಕ್ರಿಕೆಟರ್: ಲಿಜೆಲ್ ಲೀ(ದಕ್ಷಿಣ ಆಫ್ರಿಕಾ)
- ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್: ಜೋ ರೂಟ್(ಇಂಗ್ಲೆಂಡ್)
- ಐಸಿಸಿ ವರ್ಷದ ಪುರುಷ ಉದಯೋನ್ಮುಖ ಕ್ರಿಕೆಟರ್: ಜನ್ನೆಮನ್ ಮಲನ್(ದಕ್ಷಿಣ ಆಫ್ರಿಕಾ)
- ಐಸಿಸಿ ವರ್ಷದ ಮಹಿಳಾ ಉದಯೋನ್ಮುಖ ಕ್ರಿಕೆಟರ್: ಫಾತಿಮಾ ಸನಾ(ಪಾಕಿಸ್ತಾನ)
- ಐಸಿಸಿ ವರ್ಷದ ಅಸೋಸಿಯೇಟ್ ಪುರುಷ ಕ್ರಿಕೆಟರ್ : ಜೀಶಾನ್ ಮಕ್ಸೂದ್(ಓಮಾನ್)
- ಐಸಿಸಿ ವರ್ಷದ ಅಸೋಸಿಯೇಟ್ ಮಹಿಳಾ ಕ್ರಿಕೆಟರ್: ಆ್ಯಂಡ್ರಿಯಾ-ಮೇ ಜಿಪೆಡಾ(ಆಸ್ಟ್ರೀಯಾ)
- ಐಸಿಸಿ ವರ್ಷದ ಅಂಪೈರ್: ಮರಿಯಾಸ್ ಎರಾಸ್ಮಸ್
ಇದನ್ನೂ ಓದಿ:2ನೇ ಬಾರಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದ ಮಂಧಾನ.. ಈ ವರ್ಷ ಏಕೈಕ ಭಾರತೀಯೆ