ದುಬೈ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಲೀಗ್ ಹಂತದ 20 ಪಂದ್ಯದ ಅಧಿಕಾರಿಗಳಲ್ಲಿ ಭಾರತದ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳ ಸದಸ್ಯ ನಿತಿನ್ ಮೆನನ್ ಮತ್ತು ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯ ಜಾವಗಲ್ ಶ್ರೀನಾಥ್ ಸೇರಿದ್ದಾರೆ. ಈ ಮೆಗಾ ಟೂರ್ನಮೆಂಟ್‌ನ ಲೀಗ್ ಹಂತದಲ್ಲಿ 16 ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ, ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಮಿರೇಟ್ಸ್ ಎಲೈಟ್ ಪ್ಯಾನೆಲ್‌ನ ಎಲ್ಲ 12 ಅಂಪೈರ್‌ಗಳು ಮತ್ತು ಐಸಿಸಿ ಎಮರ್ಜಿಂಗ್ ಅಂಪೈರ್ ಪ್ಯಾನೆಲ್‌ನ 4 ಸದಸ್ಯರಿದ್ದಾರೆ.
12 ಅಂಪೈರ್‌ಗಳ ಐಸಿಸಿ ಎಲೈಟ್ ಪ್ಯಾನೆಲ್: ಕ್ರಿಸ್ಟೋಫರ್ ಗಾಫ್ನಿ (ನ್ಯೂಜಿಲ್ಯಾಂಡ್ ), ಕುಮಾರ್ ಧರ್ಮಸೇನಾ (ಶ್ರೀಲಂಕಾ), ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ), ಮೈಕೆಲ್ ಗಾಫ್ (ಇಂಗ್ಲೆಂಡ್), ನಿತಿನ್ ಮೆನನ್ (ಭಾರತ), ಪಾಲ್ ರೀಫೆಲ್ (ಆಸ್ಟ್ರೇಲಿಯಾ), ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ರಿಚರ್ಡ್ ಕೆಟಲ್ಬರೋ (ಇಂಗ್ಲೆಂಡ್), ರಾಡ್ನಿ ಟಕರ್ (ಆಸ್ಟ್ರೇಲಿಯಾ), ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್), ಅಹ್ಸಾನ್ ರಜಾ (ಪಾಕಿಸ್ತಾನ), ಮತ್ತು ಆಡ್ರಿಯನ್ ಹೋಲ್ಡ್ಸ್ಟಾಕ್ (ದಕ್ಷಿಣ ಆಫ್ರಿಕಾ).
ಐಸಿಸಿ ಉದಯೋನ್ಮುಖ ಅಂಪೈರ್‌ಗಳು: ಶರಫುದ್ದೌಲಾ ಇಬ್ನೆ ಶಾಹಿದ್ (ಬಾಂಗ್ಲಾದೇಶ), ಪಾಲ್ ವಿಲ್ಸನ್ (ಆಸ್ಟ್ರೇಲಿಯಾ), ಅಲೆಕ್ಸ್ ವಾರ್ಫ್ (ಇಂಗ್ಲೆಂಡ್) ಮತ್ತು ಕ್ರಿಸ್ ಬ್ರೌನ್ (ನ್ಯೂಜಿಲೆಂಡ್). ಕುಮಾರ್ ಧರ್ಮಸೇನಾ, ಮರೈಸ್ ಎರಾಸ್ಮಸ್ ಮತ್ತು ರಾಡ್ ಟಕ್ಕರ್ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2019 ರ ಫೈನಲ್ನಲ್ಲಿ ಕಾರ್ಯನಿರ್ವಹಿಸಿದ್ದರು. ಈ ಫೈನಲ್ನಲ್ಲಿ ಅಲೀಂ ದಾರ್ ಸಹ ಕಾರ್ಯನಿರ್ವಹಿಸಿದ್ದರು ಅವರು ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.