ನವದೆಹಲಿ: ನನ್ನ ನಾಯಕತ್ವದ ಅವಧಿಯಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲಾರದ ಕಾರಣ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಲಾಗಿದೆ. ಆದರೆ, ಈ ದೃಷ್ಟಿಕೋನದಿಂದ ನನ್ನನ್ನು ನಾನು ಎಂದಿಗೂ ಜಡ್ಜ್ ಮಾಡಿಕೊಂಡಿಲ್ಲ ಎಂದು ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ತಮ್ಮ ಐಪಿಎಲ್ ತಂಡವಾದ ರಾಯಲ್ ಚಾಂಲೆಜರ್ಸ್ ಬೆಂಗಳೂರು ಪಾಡ್ಕಾಸ್ಟ್ನಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ವಿರಾಟ್ ಕೊಯ್ಲಿ ನಾಯಕತ್ವ: ಭಾರತದ ಅಂತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿರುವ ಅವರು, 40 ಪಂದ್ಯಗಳಲ್ಲಿ ಜಯವನ್ನು ತಂದುಕೊಡುವ ಮೂಲಕ 42 ತಿಂಗಳಗಳ ಕಾಲ ತಂಡವನ್ನು ಟಾಪ್ ರ್ಯಾಂಕ್ನಲ್ಲಿರಿಸಿದ್ದ ಕೀರ್ತಿ ಹೊಂದಿದ್ದಾರೆ. ಇದರ ಹೊರತಾಗಿ 65 ಏಕದಿನ ಪಂದ್ಯ ಮತ್ತು 30 ಟಿ20 ಪಂದ್ಯದ ನಾಯಕರಾಗಿ ಕೊಹ್ಲಿ ಸಾಧನೆ ಅವರ ಹೆಸರಲ್ಲಿದೆ. ಕೊಹ್ಲಿ ನಾಯಕತ್ವದ ಅಡಿ 2017 ಚಾಂಪಿಯನ್ ಟ್ರೋಪಿ ಮತ್ತು 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ರನ್ನರ್ ಅಪ್ ಆಯಿತು. 2019 ರ ಏಕದಿನ ಪಂದ್ಯದಲ್ಲಿ ವಿಶ್ವಕಪ್ನ ಸೆಮಿಫೈನಲ್ ತಲುಪಿದನ್ನು ಹೊರತುಪಡಿಸಿ, 2021 ಟಿ20 ವಿಶ್ವಕಪ್ನಲ್ಲಿ ಕೊನೆಯ ನಾಲ್ಕು ಹಂತಗಳನ್ನು ತಲುಪಲಿಲ್ಲ.
ಪಂದ್ಯಕ್ಕಿಂತ ಇತರೆ ಅಂಶವೂ ಮುಖ್ಯ: ನಾನು ನನ್ನ ದೃಷ್ಟಿಕೋನದಿಂದ ಎಂದಿಗೂ ನನ್ನನ್ನು ನಿರ್ಣಯಿಸಲಿಲ್ಲ. ತಂಡವಾಗಿ ಸಾಧನೆಯನ್ನು ನಾವು ಕೊನೆಗೊಳಿಸುತ್ತೇವೆ. ಸಾಂಸ್ಕೃತಿಕ ಬದಲಾವಣೆಯಾಗಿ ಸಾಧಿಸಿದ್ದು ನನಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿದೆ. ಪಂದ್ಯಾವಳಿಯು ಕೆಲವು ನಿರ್ದಿಷ್ಟ ಅವಧಿಗೆ ಮಾತ್ರ ನಡೆಯುತ್ತದೆ. ಆದರೆ ಸಾಂಸ್ಕೃತಿಕತೆ ದೀರ್ಘಕಾಲವಧಿಯದು. ಅದಕ್ಕಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಇದಕ್ಕಾಗಿ ನೀವು ಪಂದ್ಯಕ್ಕಿಂತ ಹೆಚ್ಚಿನ ಅಂಶಗಳು ಪಾತ್ರವಹಿಸುತ್ತವೆ ಎಂದಿದ್ದಾರೆ.