ಕರ್ನಾಟಕ

karnataka

ETV Bharat / sports

ಕಾಂಗರೂ ಸರಣಿಯಿಂದ ಕೈಬಿಟ್ಟ ಬಳಿಕ ತಂತ್ರಗಾರಿಕೆ ಬದಲಾವಣೆ: ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಪೃಥ್ವಿ!

ಬ್ಯಾಟಿಂಗ್​ ತಂತ್ರಗಾರಿಕೆಯಲ್ಲಿ ಮಾಡಿಕೊಂಡಿರುವ ಕೆಲವೊಂದು ಬದಲಾವಣೆಗಳಿಂದ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಪೃಥ್ವಿ ಶಾ ಹೇಳಿಕೊಂಡಿದ್ದಾರೆ.

By

Published : Apr 19, 2021, 5:29 PM IST

Shaw
Shaw

ಮುಂಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡ್ತಿದ್ದು, ಅದಕ್ಕೆ ಕಾರಣವಾಗಿದ್ದು ಬ್ಯಾಟಿಂಗ್​ ತಂತ್ರಗಾರಿಕೆಯಲ್ಲಿ ಮಾಡಿಕೊಂಡಿರುವ ಕೆಲವೊಂದು ಬದಲಾವಣೆಗಳು ಎಂದು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಪೃಥ್ವಿ ಶಾ ಅಡಿಲೇಡ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಎರಡು ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ನಂತರದ ಪಂದ್ಯಗಳಲ್ಲಿ ಅವರನ್ನ ಕೈಬಿಟ್ಟು ಬೇರೆ ಪ್ಲೇಯರ್ಸ್​ಗೆ ಅವಕಾಶ ನೀಡಲಾಗಿತ್ತು. ಇದು ಅವರ ಚಿಂತೆಗೆ ಕಾರಣವಾಗಿತ್ತು. ಅಲ್ಲಿಂದ ವಾಪಸ್​ ಬಂದ ಬಳಿಕ ವಿಜಯ್​ ಹಜಾರೆ ಟ್ರೋಫಿಯಲ್ಲಿ ಮಿಂಚು ಹರಿಸಿದ ಪೃಥ್ವಿ ಶಾ 8 ಪಂದ್ಯಗಳಿಂದ 827ರನ್​ಗಳಿಕೆ ಮಾಡಿ ಟಾಪ್​ ಸ್ಕೋರ್​ರ ಆಗಿ ಹೊರಹೊಮ್ಮಿದ್ದರು.

ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲೂ ಉತ್ತಮ ಪ್ರದರ್ಶನ ನೀಡ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ ಎದುರು 38 ಎಸೆತಗಳಲ್ಲಿ 72 ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 32 ರನ್​ಗಳಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ತಮ್ಮ ಬ್ಯಾಟಿಂಗ್​ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಂಡಿರುವುದು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಆಪತ್ಬಾಂಧವನ ಹೆಸರಲ್ಲಿದೆ ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ

ಆಸ್ಟ್ರೇಲಿಯಾ ಸರಣಿಯಿಂದ ಕೈಬಿಡುತ್ತಿದ್ದಂತೆ ನನಗೆ ಆತಂಕ ಶುರುವಾಯಿತು. ಹೀಗಾಗಿ ತಂತ್ರಗಳಲ್ಲಿ ಸುಧಾರಣೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ನಿನ್ನೆ ಪಂಜಾಬ್​ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಪೃಥ್ವಿ ಶಾ, ಕ್ರಿಕೆಟ್​​ ಪಂದ್ಯಗಳಲ್ಲಿ ಸಣ್ಣ ತಪ್ಪುಗಳಿಗಾಗಿ ವಿಕೆಟ್​​ ಒಪ್ಪಿಸುತ್ತಿರುವುದು ತುಂಬಾ ಚಿಂತೆಗೊಳ ಮಾಡಿತು. ಇದೀಗ ಬೌಲರ್​ಗಳನ್ನ ಎದುರಿಸುವಾಗ ಆ ತಪ್ಪು ಸರಿಮಾಡಿಕೊಂಡಿದ್ದು, ಕ್ರೀಸ್​ನಲ್ಲಿ ಭದ್ರವಾಗಿ ನಿಂತು ಎಲ್ಲ ಎಸೆತ ಎದುರಿಸುತ್ತಿದ್ದೇನೆ ಎಂದಿದ್ದಾರೆ.

ಆಸ್ಟ್ರೇಲಿಯಾದಿಂದ ವಾಪಸ್ ಬಂದ ಬಳಿಕ ನಾನು ತರಬೇತುದಾರರಾದ ಪ್ರಶಾಂತ್​​ ಶೆಟ್ಟಿ ಸರ್​ ಹಾಗೂ ಪ್ರವೀಣ್ ಆಮ್ರೆ ಜತೆ ಕೆಲ ಮಾಡಿದ್ದೇನೆ. ಅವರೊಂದಿಗೆ ಸಾಕಷ್ಟು ಕೆಲ ಮಾಡಿದ್ದರಿಂದ ವಿಜಯ್​ ಹಜಾರೆಯಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಲು ಸಾಧ್ಯವಾಯಿತು ಎಂದರು. ಇಂಡಿಯನ್​ ಪ್ರೀಮಿಯರ್ ಲೀಗ್​ಗಾಗಿ ಹೆಚ್ಚಿನ ಅಭ್ಯಾಸ ನಡೆಸಿಲ್ಲ. ಆದರೆ, ತಂಡದ ಕೋಚ್ ರಿಕಿ ಪಾಟಿಂಗ್​ ಜೊತೆ ಕೆಲ ಸಮಯ ಚರ್ಚೆ ನಡೆಸಿದ್ದೇನೆ ಎಂದರು.

ABOUT THE AUTHOR

...view details