ಕರ್ನಾಟಕ

karnataka

ETV Bharat / sports

ತಂದೆ ಕಳೆದುಕೊಂಡು ಕಣ್ಣೀರಿಡುತ್ತಿದ್ದಾಗ ಸಂತೈಸಿದ್ದು ವಿರಾಟ್​ ಭಾಯ್: ಸಿರಾಜ್​ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಭಾರತ ತಂಡದ ಸ್ಟಾರ್​ ಬೌಲರ್​ಗಳ ಅನುಪಸ್ಥಿತಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು ಅದೇ ಸರಣಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುಂದೆ ನಿಂತು ಮುನ್ನಡೆಸಿದ್ದರು. ಅದರಲ್ಲೂ ಗಬ್ಬಾದ ವಿಜಯದಲ್ಲಿ ಸಿರಾಜ್​ ಪಾತ್ರ ಮಹತ್ವದ್ದಾಗಿತ್ತು. ಹೈದರಾಬಾದ್ ಬೌಲರ್​ ಈ ವಿಜಯ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಮೊಹಮ್ಮದ್​ ಸಿರಾಜ್​
ಮೊಹಮ್ಮದ್​ ಸಿರಾಜ್​

By

Published : May 11, 2021, 10:17 PM IST

ಹೈದರಾಬಾದ್​: ತಂದೆ ನಿಧನದ ನಂತರವೂ ತವರಿಗೆ ಮರಳದೇ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಭಾರತ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿ ಟೆಸ್ಟ್​ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಮೊಹಮ್ಮದ್ ಸಿರಾಜ್​, ಇದಕ್ಕೆಲ್ಲಾ ನಾಯಕ ವಿರಾಟ್​ ನೀಡಿದ ಬೆಂಬಲವೇ ಕಾರಣ ಎಂದು ತಿಳಿಸಿದ್ದಾರೆ.

ಭಾರತ ತಂಡದ ಸ್ಟಾರ್​ ಬೌಲರ್​ಗಳ ಅನುಪಸ್ಥಿತಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು ಅದೇ ಸರಣಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುಂದೆ ನಿಂತು ಮುನ್ನಡೆಸಿದ್ದರು. ಅದರಲ್ಲೂ ಗಬ್ಬಾದ ವಿಜಯದಲ್ಲಿ ಸಿರಾಜ್​ ಪಾತ್ರ ಮಹತ್ವದ್ದಾಗಿತ್ತು. ಹೈದರಾಬಾದ್ ಬೌಲರ್​ ಈ ವಿಜಯ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಸಿರಾಜ್ 2017ರಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ವೈಟ್​ ಬಾಲ್​ ಮಾದರಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರದೇ ತಂಡದಿಂದ ಹೊರಬಿದ್ದರು. ದೇಶಿಯ ಕ್ರಿಕೆಟ್​ನಲ್ಲಿ ಅವರು ಉತ್ತಮ ಪ್ರದರ್ಶನವನ್ನು ಮುಂದುವರಿಸಿ 2020ರಲ್ಲಿ ಟೆಸ್ಟ್​ ತಂಡಕ್ಕೆ ಮರಳಿದರು. ಇದೀಗ ತಂಡದಲ್ಲಿ ಖಾಯಂ ಬೌಲರ್​ ಆಗಿ ಉಳಿದುಕೊಂಡಿದ್ದಾರೆ. ಅವರ ಪ್ರಕಾರ ಇದಕ್ಕೆಲ್ಲಾ ಕೊಹ್ಲಿ ಕಾರಣರಾಗಿದ್ದು, ತಮ್ಮ ವೃತ್ತಿಜೀವನಕ್ಕೆ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.

" ವಿರಾಟ್ ಭಯ್ಯಾ, ನಿನ್ನಲ್ಲಿ ಪ್ರತಿಭೆಯಿದೆ, ಯಾವುದೇ ಪಿಚ್​ನಲ್ಲಾದರೂ ಆಡುವ ಸಾಮರ್ಥ್ಯವಿದೆ, ಯಾವುದೇ ಬ್ಯಾಟ್ಸ್​ಮನ್ ರನ್ನು ಔಟ್ ಮಾಡಬಲ್ಲೇ" ಎಂದು ಯಾವಾಗಲೂ ಹೇಳುತ್ತಿರುತ್ತಾರೆ.​

"ನಾನು ಆಸ್ಟ್ರೇಲಿಯಾ ಸರಣಿ ವೇಳೆ ತಂದೆಯನ್ನು ಕಳೆದುಕೊಂಡೆ. ಆ ಸಂದರ್ಭದಲ್ಲಿ ನಾನು ಚೂರು ಚೂರಾಗಿತ್ತು. ಆದರೆ, ವಿರಾಟ್ ಭಯ್ಯಾ ನನ್ನಲ್ಲಿ ಬಲ ತುಂಬಿದರು, ಬೆಂಬಲ ನೀಡಿದರು. ನನ್ನ ಈ ವೃತ್ತಿಜೀವನಕ್ಕೆ ನಾನು ಕೊಹ್ಲಿಗೆ ಋಣಿಯಾಗಿರುತ್ತೇನೆ" ಎಂದು ಸಿರಾಜ್​ ಖಾಸಗಿ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ:ಕೊಹ್ಲಿಪಡೆ ಖಂಡಿತ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ

ABOUT THE AUTHOR

...view details