ಮುಂಬೈ :ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ರನ್ನು ಪ್ರಶಂಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್, ಲೆಜೆಂಡರಿ ಬ್ಯಾಟರ್ ಜೊತೆ ಒಟ್ಟಿಗೆ ಆಡುವಾಗ ಅವರಿಂದ ಎಷ್ಟು ಸಾಧ್ಯವೋ ಅಷ್ಟನ್ನು ಕಲಿಯಲು ಪ್ರಯತ್ನಿಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸಾಮ್ಸನ್ ಅವಕಾಶ ಪಡೆದಾಗ ಅವರಿಗೆ 18 ವರ್ಷ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ರಾಯಲ್ಸ್ ತಂಡದ ನಾಯಕನಾಗಿದ್ದರು. ದ್ರಾವಿಡ್ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಡೇರ್ ಡೇವಿಲ್ಸ್ ಮತ್ತು ಭಾರತ ತಂಡಕ್ಕೆ ಕೋಚ್ ಆಗುವ ಮುನ್ನ ಇವರಿಬ್ಬರೂ ಕೆಲವು ಸಮಯ ಟೀಮ್ ಮೇಟ್ಗಳಾಗಿದ್ದರು.
ಗೌರವ್ ಕಪೂರ್ ಅವರ ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳುವುದಕ್ಕೆ ದ್ರಾವಿಡ್ ಹೇಗೆ ನೆರವಾದರು ಎಂಬುದರ ಬಗ್ಗೆ ಸಾಮ್ಸನ್ ಮನಬಿಚ್ಚಿ ಮಾತನಾಡಿದ್ದಾರೆ. ದ್ರಾವಿಡ್ ಅವರು ನಾನು ಕ್ರಿಕೆಟಿಗ ಮತ್ತು ಒಬ್ಬ ವ್ಯಕ್ತಿಯಾಗಿ ಬೆಳೆಯಲು ಸಹಾಯ ಮಾಡಿದ್ದಾರೆ. ನಾನು ನನ್ನ ವ್ಯಕ್ತಿತ್ವದಲ್ಲಿ ಭಾರತೀಯ ಕೋಚ್‌ನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇನೆ ಎಂದು ಸಾಮ್ಸನ್ ಹೇಳಿದ್ದಾರೆ.