ಕರ್ನಾಟಕ

karnataka

ನನ್ನದೇ ಆದ ಯೋಜನೆಗಳಿಗೆ ಅಂಟಿಕೊಂಡಿರುತ್ತೇನೆ, ಮಂಕಡ್​ ಬಗ್ಗೆ ತಲೆಕೆಡಿಸಿಕೊಳ್ಳಲ್ಲ: ಬೌಲ್ಟ್

By

Published : Apr 22, 2021, 8:44 PM IST

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಡ್ವೇನ್ ಬ್ರಾವೋ ಕೊನೆಯ ಓವರ್​ನಲ್ಲಿ ಮುಸ್ತಫಿಜುರ್​ ರೆಹಮಾನ್ ಓವರ್​ನಲ್ಲಿ ಬಾಲ್​ ಡೆಲಿವರಿಯಾಗುವ ಮುನ್ನವೇ ಒಂದು ಮೀಟರ್​ನಷ್ಟು ಕ್ರೀಸ್ ಬಿಟ್ಟು ಹೋಗಿದ್ದರು. ಈ ಫೋಟೊವನ್ನು ಮಾಜಿ ವೇಗಿ ಮತ್ತು ಕನ್ನಡಿಗ ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿ ಖಂಡಿಸಿದ್ದರು.

ಮಂಕಡ್​ ಬಗ್ಗೆ ಬೌಲ್ಟ್​ ಹೇಳಿಕೆ
ಮಂಕಡ್​ ಬಗ್ಗೆ ಬೌಲ್ಟ್​ ಹೇಳಿಕೆ

ಚೆನ್ನೈ:ಮುಂಬೈ ಇಂಡಿಯನ್ಸ್​ ವೇಗಿ ಟ್ರೆಂಟ್​ ಬೌಲ್ಟ್​ ಮಂಕಡ್​ ಚರ್ಚೆ ಕುರಿತು ಭಾಗವಹಿಸಲು ನಿರಾಕರಿಸಿದ್ದು, ಇದು ತಮಗೆ ಒಬ್ಬ ಬೌಲರ್​ ಆಗಿ ಈ ವಿಚಾರ ಎಂದೂ ತೊಂದರೆ ಅನಿಸಿಲ್ಲ ಎಂದು ಹೇಳಿದ್ದಾರೆ.

" ಇದು ಸಾಕಷ್ಟು ಸೂಕ್ಷ್ಮ ವಿಷಯ ಎಂದು ನಾನು ಭಾವಿಸುತ್ತೇನೆ. ನನ್ನ ದೃಷ್ಟಿಕೋನದಿಂದ ಇದು ನಿಜವಾಗಿಯೂ ನನ್ನ ಮನಸ್ಸಿಗೆ ದಾಟುವುದಿಲ್ಲ" ಎಂದು ಪಂಜಾಬ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬೌಲ್ಟ್ ಹೇಳಿದ್ದಾರೆ,

ಪಂದ್ಯದ ವೇಳೆ ನನಗೆ ಪ್ರಯತ್ನಿಸಲು ಕಾರ್ಯಗತಗೊಳಿಸಲು ಸಾಕಷ್ಟು ವಿಷಯಗಳಿವೆ, ಹಾಗಾಗಿ ನನ್ನ ಹೆಚ್ಚು ಗಮನ ಅದರ ಕಡೆ ಇರುತ್ತದೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನಾನು ಹೆಚ್ಚು ಗಮನಹರಿಸುತ್ತೇನೆ. ಇಂತಹ ವಿಚಾರಗಳಲ್ಲಿ ಅಂಪೈರ್​ಗಳು ತಮ್ಮ ವಿವೇಚನೆಯಿಂದ ಕರೆ ನೀಡುವ ಶಕ್ತಿ ಹೊಂದಿದ್ದಾರೆ. ಅದರ(ಮಂಕಡ್​) ಕಡೆ ನಾನು ಹೆಚ್ಚು ಚಿಂತೆ ಮಾಡುವಂತೆ ತೋರುತ್ತಿಲ್ಲ "ಎಡಗೈ ವೇಗದ ಬೌಲರ್ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಡ್ವೇನ್ ಬ್ರಾವೋ ಕೊನೆಯ ಓವರ್​ನಲ್ಲಿ ಮುಸ್ತಫಿಜುರ್​ ರೆಹಮಾನ್ ಓವರ್​ನಲ್ಲಿ ಬಾಲ್​ ಡೆಲಿವರಿಯಾಗುವ ಮುನ್ನವೇ ಒಂದು ಮೀಟರ್​ನಷ್ಟು ಕ್ರೀಸ್ ಬಿಟ್ಟು ಹೋಗಿದ್ದರು. ಈ ಫೋಟೊವನ್ನು ಮಾಜಿ ವೇಗಿ ಮತ್ತು ಕನ್ನಡಿಗ ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿ ಖಂಡಿಸಿದ್ದರು.

" ಬೌಲರ್​ಗಳು ಒಂದು ಇಂದು ಗೆರೆ ದಾಟಿದರೂ ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಬ್ಯಾಟ್ಸ್​​​​ಮನ್ ಹಲವು ಅಡಿ ಮುಂದಿದ್ದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇನ್ನು ಮಂಕಡಿಂಗ್​ ಕ್ರೀಡಾಸ್ಪೂರ್ತಿಗೆ ದಕ್ಕೆ ತರುತ್ತದೆ ಎಂದು ಹೇಳುವುದು ಹಾಸ್ಯಸ್ಪದವಾಗಿದೆ" ಎಂದು ವೆಂಕಿ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು.

2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಆಡಿದ್ದ ಆರ್. ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮೂಲಕ ರನೌಟ್ ಮಾಡಿದ್ದರು. ಅಂದು ಅದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕ್ರೀಡಾ ಸ್ಫೂರ್ತಿಗೆ ದಕ್ಕೆ ಎಂದು ಕೆಲವರು ಟೀಕಿಸಿದ್ದರು. ಕೆಲವರು ಅಶ್ವಿನ್ ಪರವೂ ಮಾತನಾಡಿದ್ದರು.

ಇದನ್ನು ಓದಿ:200ನೇ ಪಂದ್ಯವನ್ನಾಡಲಿದೆ ಆರ್​ಸಿಬಿ: ವಿಶೇಷ ಮೈಲುಗಲ್ಲು ನಿರ್ಮಿಸಲು ವಿರಾಟ್ - ಎಬಿಡಿ ಕಾತುರ

ABOUT THE AUTHOR

...view details