ಹೈದರಾಬಾದ್:ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ (AB de Villiers) ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಆರ್ಸಿಬಿ(RCB) ಸೇರಿದಂತೆ ಅನೇಕರು ಶುಭ ಹಾರೈಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ವಿಡಿಯೋ ಹಂಚಿಕೊಂಡಿರುವ ಮಿಸ್ಟರ್ 360 ಭಾರತದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ನಾನು ಅರ್ಧ ಭಾರತೀಯ. ಅರ್ಧ ದಕ್ಷಿಣ ಆಫ್ರಿಕಾದವನು. ಭಾರತ ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ ಎಂದಿದ್ದಾರೆ. ನಾನು ಕೊನೆಯವರೆಗೂ ಆರ್ಸಿಬಿಯನ್ ಆಗಿರುತ್ತೇನೆ. ಆರ್ಸಿಬಿ ಕುಟುಂಬದಲ್ಲಿರುವ ಪ್ರತಿಯೊಬ್ಬರು ನನಗೆ ಕುಟುಂಬ ಇದ್ದ ಹಾಗೆ. ನಮ್ಮ ಜೀವನದಲ್ಲಿ ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಆರ್ಸಿಬಿಯಲ್ಲಿ ನಾವು ಪರಸ್ಪರ ಹೊಂದಾಣಿಕೆ ಮನೋಭಾವ ಮತ್ತು ಪ್ರೀತಿ ಹೊಂದಿದ್ದೇವೆ ಎಂದಿದ್ದಾರೆ.