ಕರ್ನಾಟಕ

karnataka

ETV Bharat / sports

4 ಎಸೆತ 3 ಸಿಕ್ಸರ್! 'ಎರಡು ವರ್ಷಗಳ ಕಠಿಣ ಅಭ್ಯಾಸ ಫಲ ನೀಡಿತು'- ರಶೀದ್​ ಖಾನ್ - ಹಾರ್ದಿಕ್ ಪಾಂಡ್ಯ

ರಶೀದ್​ ನಿನ್ನೆಯ ಪಂದ್ಯದಲ್ಲಿ 11 ಎಸೆತಗಳಲ್ಲಿ ಅಜೇಯ 31 ರನ್​ಗಳಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.

Rashid  on Finishing job
ರಶೀದ್ ಖಾನ್ ಫಿನಿಶಿಂಗ್

By

Published : Apr 28, 2022, 3:51 PM IST

ಮುಂಬೈ:ಬುಧವಾರ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೊನೆಯ 4 ಎಸೆತಗಳಲ್ಲಿ 3 ಸಿಕ್ಸರ್​ ಸಿಡಿಸುವ ಮೂಲಕ ರಶೀದ್​ ಖಾನ್​ 22 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಗುಜರಾತ್​ ಟೈಟನ್ಸ್​ಗೆ ನೆರವಾಗಿದ್ದರು. ಈ ಕುರಿತು ಮಾತನಾಡಿದ ಅಫ್ಘಾನ್ ಸ್ಟಾರ್, ಇಂತಹ ಪ್ರದರ್ಶನವನ್ನು ಕಾರ್ಯಗತಗೊಳಿಸುವುದರ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು ಎಂದರು.

ತಮ್ಮ ಲೆಗ್​ ಸ್ಪಿನ್​ ಬೌಲಿಂಗ್​ನಿಂದ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ದಾಖಲೆ ಹೊಂದಿರುವ ರಶೀದ್​ ಖಾನ್, ನಿನ್ನೆಯ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ವಿಫಲರಾದರು. ಆದರೆ ಬ್ಯಾಟಿಂಗ್​ನಲ್ಲಿ ಕೇವಲ 11 ಎಸೆತಗಳಲ್ಲಿ ಅಜೇಯ 31 ರನ್​ಗಳಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅದರಲ್ಲೂ ಕೊನೆಯ 4 ಎಸೆತಗಳಲ್ಲಿ 15 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಮಾರ್ಕೊ ಜಾನ್ಸನ್​ ಎಸೆತಗಳಿಗೆ 3 ಸಿಕ್ಸರ್​ ಸಿಡಿಸಿ ಗುಜರಾತ್​ ಟೈಟನ್ಸ್​ಗೆ 5 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಇವರಿಗೆ ಸಾಥ್ ನೀಡಿದ ತೆವಾಟಿಯಾ 21 ಎಸೆತಗಳಲ್ಲಿ ಅಜೇಯ 40 ರನ್​ಗಳಿಸಿದರು.

'ಈ ಅನುಭವ ಅದ್ಭುತ. ಪಂದ್ಯವನ್ನು ಫಿನಿಶ್ ಮಾಡಬೇಕೆಂದು ಮನಸಿನಲ್ಲಿಟ್ಟುಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ಬಲ ಬಳಸಿ ಹೊಡೆದೆ. ಇದನ್ನು ಸನ್​ರೈಸರ್ಸ್ ವಿರುದ್ಧ ಮಾಡಿರುವುದಕ್ಕೆ ನನಗೆ ಖುಷಿಯಿದೆ. ಕಳೆದ 2 ವರ್ಷಗಳಿಂದ ಬ್ಯಾಟಿಂಗ್ ಮೇಲೆ ಸಾಕಷ್ಟು ಶ್ರಮಿಸುತ್ತಿದ್ದೇನೆ. ಹಾಗಾಗಿ ಈ ಪಂದ್ಯದಲ್ಲಿ ಫಿನಿಶ್ ಮಾಡಬಲ್ಲೆ ಎಂಬ ವಿಶ್ವಾಸವಿತ್ತು' ಎಂದು ತಮ್ಮ ಸಾಹಸ ಪ್ರದರ್ಶನದ ಬಗ್ಗೆ ಪಂದ್ಯ ಮುಗಿದ ನಂತರ ರಶೀದ್ ಮಾತನಾಡಿದರು.

ಕೊನೆಯ ಓವರ್​ ವೇಳೆ ತೆವಾಟಿಯಾ ಜೊತೆಗೆ ನಡೆದ ಸಂಭಾಷಣೆಯ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ರಶೀದ್​, ಕೊನೆಯ ಓವರ್​ನಲ್ಲಿ 22 ರನ್​ಗಳು ಉಳಿದಿದ್ದವು. ನಾವು ಅಂತಿಮ ಓವರ್​ನಲ್ಲಿ ನಮ್ಮ ಬೆಸ್ಟ್ ಬೌಲರ್​ ಇದ್ದರೂ 25 ರನ್ ಬಿಟ್ಟುಕೊಟ್ಟಿದ್ದೇವೆ. ನಾವು ಇದೀಗ ಅದನ್ನು ಪಡೆಯಬೇಕು ಎಂದು ​ನಾನು ತೆವಾಟಿಯಾಗೆ ಹೇಳಿದೆ. ಒಂದು ವೇಳೆ ಒಂದು ಎಸೆತ ಮಿಸ್​ ಆದರೂ ಆ ಬಗ್ಗೆ ಆಲೋಚಿಸಬಾರದು ಮತ್ತು ಭೀತಿಗೆ ಒಳಗಾಗಬಾರದು. ನಾವು ಪಂದ್ಯವನ್ನು ಯಶಸ್ವಿಯಾಗಿ ಮುಗಿಸುವ ಅಥವಾ ತುಂಬಾ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದೆ. ಏಕೆಂದರೆ ಅದು ಮುಂದೆ ನಮಗೆ ರನ್​ರೇಟ್​ ವಿಷಯದಲ್ಲಿ ನೆರವಾಗಬಹುದು ಎಂದೆ. ಅದೃಷ್ಟವಶಾತ್​ ನಾವು 4 ಸಿಕ್ಸರ್​ ಪಡೆದುಕೊಂಡೆವು ಎಂದು ರಶೀದ್ ತಿಳಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್, ಅಭಿಷೇಕ್ ಶರ್ಮಾ ಮತ್ತು ಮಾರ್ಕ್ರಮ್ ಅವರ ಅರ್ಧಶತಕಗಳ ನೆರವಿನಿಂದ 195 ರನ್​ಗಳಿಸಿತ್ತು. ಈ ಮೊತ್ತವನ್ನು ವೃದ್ಧಿಮಾನ್ ಸಹಾ(63) ಮತ್ತು ತೆವಾಟಿಯಾ ಹಾಗೂ ರಶೀದ್​ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಟೈಟನ್ಸ್ ಅಗ್ರಸ್ಥಾನಕ್ಕೇರಿತು.

ಇದನ್ನೂ ಓದಿ:ತೆವಾಟಿಯಾ-ರಾಶೀದ್​ ಕೆಚ್ಚೆದೆಯ ಬ್ಯಾಟಿಂಗ್​​... ಹೈದರಾಬಾದ್​ ವಿರುದ್ಧ ಗೆದ್ದ ಗುಜರಾತ್​ ಟೈಟನ್ಸ್​​​

ABOUT THE AUTHOR

...view details