ಬ್ರಿಸ್ಬೇನ್: ಕ್ರಿಕೆಟಿಗರಿಗೆ ಅಥವಾ ಯಾವುದೇ ತಂಡಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳುವುದು ತುಂಬಾ ಸುಲಭವಾಗಿದೆ. ಆದರೆ ಅದೇ ಪರಿಸ್ಥಿತಿ ಹೊಂದಿರುವ ಭಾರತದ ವಿಷಯ ಬಂದಾಗ ಎಲ್ಲರ ನಿರ್ಧಾರವೇ ಬೇರೆಯೇ ಆಗಿರುತ್ತದೆ ಎಂದು ಆಸ್ಟ್ರೇಲಿಯಾ ಕ್ರಿಕೆಟರ್ ಉಸ್ಮಾನ್ ಖವಾಜ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ 18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಪಂದ್ಯಾರಂಭಕ್ಕೆ ಕೇವಲ ನಿಮಿಷಗಳಿರುವಾಗ ಭದ್ರತಾ ಕಾರಣ ನೀಡಿ ಇಡೀ ಪ್ರವಾಸವನ್ನೇ ರದ್ದುಗೊಳಿಸಿ ತವರಿಗೆ ಮರಳಿತ್ತು. ಎರಡು ದಿನಗಳ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್(ಇಸಿಬಿ) ಕೂಡ ತನ್ನ ಮಹಿಳಾ ಮತ್ತು ಪುರುಷರ ತಂಡವನ್ನು ಪಾಕಿಸ್ತಾನ ಪ್ರವಾಸಕ್ಕೆ ಕಳುಹಿಸದಿರಲು ನಿರ್ಧರಿಸುವುದಾಗಿ ಘೋಷಿಸಿತ್ತು.
ವೆಸ್ಟ್ ಇಂಡೀಸ್ ಡಿಸೆಂಬರ್ನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ ಕೂಡ ಮುಂದಿನ ವರ್ಷ ಪಾಕಿಸ್ತಾನ ಪ್ರವಾಸ ಮಾಡಬೇಕಿದೆ. ಆದರೆ ಈ ಪ್ರವಾಸಗಳು ಪರಿಶೀಲನೆಯಲ್ಲಿದ್ದು ವೇಳಾಪಟ್ಟಿಯಂತೆ ನಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.