ಕರ್ನಾಟಕ

karnataka

ETV Bharat / sports

2007ರ ಟಿ-20 ವಿಶ್ವಕಪ್​ನಲ್ಲಿ ನಾನೇ ನಾಯಕನಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆ! ಆದ್ರೆ ಧೋನಿ ಆದ್ರು

ನಿವೃತ್ತಿಯಾದ ಎರಡು ವರ್ಷಗಳ ನಂತರ, ಭಾರತ ತಂಡದ ನಾಯಕತ್ವ ಪಡೆಯದಿರುವ ವಿಷಾದದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಯುವರಾಜ್​ ಸಿಂಗ್ 2007ರಲ್ಲಿ ಭಾರತ ತಂಡ ಮುನ್ನಡೆಸುವ ನಿರೀಕ್ಷೆಯಿತ್ತು ಎಂದು ಹೇಳಿದ್ದಾರೆ.

ಯುವರಾಜ್ ಸಿಂಗ್
ಯುವರಾಜ್ ಸಿಂಗ್

By

Published : Jun 10, 2021, 5:54 PM IST

ಮುಂಬೈ: ಭಾರತ ತಂಡ 2007ರ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲಲು ಆಲ್​ರೌಂಡರ್​ ಯುವರಾಜ್​ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಒಂದೂವರೆ ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸಿದ ಪಂಜಾಬ್​ ಆಟಗಾರ ಒಂದೇ ಒಂದು ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿಲ್ಲ. ಆದರೆ, 2007ರ ಟಿ-20 ವಿಶ್ವಕಪ್​ಗೆ ಸಚಿನ್ ಸೇರಿದಂತೆ ಹಿರಿಯ ಆಟಗಾರರ ಆಡದಿರಲು ನಿರ್ಧರಿಸಿದಾಗ ಯುವ ಭಾರತ ತಂಡಕ್ಕೆ ನಾನು ನಾಯಕನಾಗಬಹುದೆಂದು ಆಲೋಚಿಸಿದ್ದೆ, ಆದರೆ ಧೋನಿಯನ್ನು ನಾಯಕನಾಗಿ ನೇಮಿಸಲಾಯಿತು ಎಂದು ಯುವಿ ಹೇಳಿಕೊಂಡಿದ್ದಾರೆ.

ನಿವೃತ್ತಿಯಾದ ಎರಡು ವರ್ಷಗಳ ನಂತರ, ಭಾರತ ತಂಡದ ನಾಯಕತ್ವ ಪಡೆಯದಿರುವ ವಿಷಾದದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಯುವರಾಜ್​ ಸಿಂಗ್ 2007ರಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿತ್ತು ಎಂದು ಹೇಳಿದ್ದಾರೆ.

2007ರ ಏಕದಿನ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ಸೋತು ಭಾರತ ತಂಡ ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಗೊಂದಲ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಭಾರತ ಎರಡು ತಿಂಗಳು ಇಂಗ್ಲೆಂಡ್ ಪ್ರವಾಸ ಮತ್ತು ಒಂದು ತಿಂಗಳು ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸವೂ ಇತ್ತು. ಆದಾದ ನಂತರ ಒಂದು ತಿಂಗಳ ವಿಶ್ವಕಪ್​ ಪ್ರವಾಸಕ್ಕೆ ತೆರಳಬೇಕಿತ್ತು. ಆಟಗಾರರು ಮನೆಯಿಂದ 4 ತಿಂಗಳು ಹೊರಗುಳಿಯಬೇಕಿತ್ತು.

ಹಾಗಾಗಿ ಹಿರಿಯ ಆಟಗಾರರು ಟಿ-20 ವಿಶ್ವಕಪ್ ಬಗ್ಗೆ ಅಷ್ಟೇನೂ ಒಲವು ತೋರದೇ ವಿಶ್ರಾಂತಿ ಬಯಸಿ, ಅವರ್ಯಾರು ಟಿ-20 ವಿಶ್ವಕಪ್​ಅನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ದರಿಂದ ಟಿ-20 ತಂಡದ ನಾಯಕತ್ವ ನನಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ, ಎಂಎಸ್​ ಧೋನಿಯನ್ನು ನಾಯಕನನ್ನಾಗಿ ಘೋಷಿಸಲಾಯಿತು ಎಂದು ಯುವರಾಜ್​ ಸಿಂಗ್ ಹೇಳಿದ್ದಾರೆ.

ಯುವರಾಜ್​ ಆ ನಿರೀಕ್ಷೆಯನ್ನಿಟ್ಟಿಕೊಳ್ಳಲು ಪ್ರಮುಖ ಕಾರಣವನ್ನು ತಿಳಿಸಿದ್ದಾರೆ. ಆ ಸಮಯದಲ್ಲಿ ಭಾರತ ತಂಡದ ನಾಯಕನಾದ ರಾಹುಲ್​ ದ್ರಾವಿಡ್​ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದರು. ಆ ದಿನಗಳಲ್ಲಿ ಯುವರಾಜ್​ ಸಿಂಗ್ ಸೀಮಿತ ಓವರ್​ಗಳಲ್ಲಿ ಭರವಸೆಯ ಕ್ರಿಕೆಟರ್​ ಆಗಿದ್ದರು, ನಿಧಾನವಾಗಿ ಟೆಸ್ಟ್​ ಕ್ರಿಕೆಟ್​ನಲ್ಲೂ ಅವಕಾಶ ಪಡೆಯಲು ಎದುರು ನೋಡುತ್ತಿದ್ದರು, ಆದರೆ, ಆಯ್ಕೆ ಸಮಿತಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಗತಾನೆ ವೃತ್ತಿ ಜೀವನ ಆರಂಭಿಸಿದ್ದ ಎಂಎಸ್​ ಧೋನಿಯನ್ನು ಆಯ್ಕೆ ಮಾಡಿದರು. ನಂತರ ಏಕದಿನ ತಂಡ, ಟೆಸ್ಟ್​ ತಂಡಕ್ಕೂ ಅವರನ್ನೇ ಆಯ್ಕೆ ಮಾಡಲಾಯಿತು.

ಇದನ್ನು ಓದಿ: ಧೋನಿಯೊಂದಿಗಿನ ನಿಮ್ಮ ಬಾಂಧವ್ಯದ ಬಗ್ಗೆ ಥಟ್‌ ಅಂತ ಹೇಳಿ? ಎರಡೇ ಪದಗಳಲ್ಲಿ ವಿರಾಟ್​ ಉತ್ತರ ಹೀಗಿತ್ತು..

ABOUT THE AUTHOR

...view details