ಹೈದರಾಬಾದ್ :ಇದೀಗಾ ಐಪಿಲ್ 2023 ಟೂರ್ನಿ ಕೊನೆ ಘಟ್ಟ ತಲುಪಿದೆ. ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಎಲ್ಎಸ್ಜಿ ತಂಡದ ವೇಗಿ ನವೀನ್ ಉಲ್ ಹಕ್ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆ ಸಾಕಷ್ಟು ವಾದ ವಿವಾದಗಳನ್ನು ಹುಟ್ಟು ಹಾಕಿತ್ತು. ಮತ್ತೊದೆಡೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸದಾ ನೆನಪಿನಲ್ಲಿ ಇದ್ದೇ ಇರುತ್ತದೆ.
ಹೀಗಾಗಿ ನವೀನ್ ಉಲ್ ಹಕ್ ಮೈದಾನದಲ್ಲಿ ಕಾಣಿಸಿಕೊಂಡಾಗ ಹಾಗೂ ಬೌಲಿಂಗ್ ಮಾಡುವಾಗ ಮೈದಾನ ತುಂಬಿಲ್ಲೆ ವಿರಾಟ್ ಕೊಹ್ಲಿ ಅಭಿಮಾನಿಗಳು 'ಕೊಹ್ಲಿ ಕೊಹ್ಲಿ' ಎಂದು ಕೂಗುತ್ತಿದ್ದಾರೆ. ಆದರೆ, ಅಫ್ಘಾನಿಸ್ತಾನದ ವೇಗಿ ಮಾತ್ರ ಇದರಿಂದ ವಿಚಲಿತರಾಗದೇ ಸುಮನ್ನಿದ್ದು ಬಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನವೀನ್ ಉಲ್ ಹಕ್, ಈ ರೀತಿ ಕೂಗುವುದರಿಂದ ನನ್ನ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ನನಗೆ ಉತ್ಸಾಹ ತುಂಬುತ್ತದೆ. ಹಾಗೂ ಅದನ್ನು ಕ್ರಿಕೆಟ್‌ನ ಒಂದು ಭಾಗ ಎಂದು ನಿರ್ಲಕ್ಷ್ಯವಾಗಿ ಪರಿಗಣಿಸುತ್ತೇನೆ ಎಂದು ಕೊಹ್ಲಿ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ (ಬುಧವಾರ) ಮುಂಬೈ ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಪರ ನವೀನ್ ಉಲ್ ಹಕ್ ಬೌಲಿಂಗ್ ಮಾಡಲು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಮತ್ತೆ ಮೈದಾನ ತುಂಬ ಕೊಹ್ಲಿ ಹೆಸರನ್ನು ಅಭಿಮಾನಿಗಳು ಪಂದ್ಯ ಮುಗಿಯುವ ವರೆಗೂ ಜಪಿಸುತ್ತಿದ್ದರು. ಇದಕ್ಕಾಗಿ ನವೀನ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಪಂದ್ಯದಲ್ಲೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದಾಗ ನವೀನ್ ತನ್ನ ಕಿವಿಗಳಲ್ಲಿ ಎರಡು ಬೆರಳುಗಳನ್ನು ಇರಿಸುವ ಮೂಲಕ ಸನ್ನೆ ಮಾಡಿದರು. ಇಲ್ಲಿ ಮತ್ತೊಮ್ಮೆ ಕೊಹ್ಲಿ ಅಭಿಮಾನಗಳ ಕೂಗಿನಿಂದ ನಾನು ವಿಚಲಿತನಾಗಿಲ್ಲ ಎಂದು ತೋರಿಸಿದ್ದರು.
ನಾನು ಆಟವನ್ನು ಆಡುವಾಗ ಮೈದಾನದ ಒಳಗಿನ ಅಥವಾ ಹೊರಗಿನ ಯಾವುದೇ ಶಬ್ದವನ್ನು ಕೇಂದ್ರೀಕರಿಸುವುದಿಲ್ಲ. ನಾನು ಕೇವಲ ನನ್ನ ಕ್ರಿಕೆಟ್ ಆಟದ ಮೇಲೆ ಮಾತ್ರ ಕೇಂದ್ರೀಕರಿಸುತ್ತೇನೆ. ಈ ರೀತಿ ಗುಂಪಿನಲ್ಲಿ ಅಭಿಮಾನಿಗಳು ಕೂಗುವುದರಿಂದ ನನ್ನ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಇದನ್ನು ಒಬ್ಬ ವೃತ್ತಿಪರ ಕ್ರೀಡಾಪಟು ಮೈಗೂಡಿಸಿಕೊಳ್ಳಬೇಕು.