ಮುಂಬೈ: ತಂಡದಲ್ಲಿ ಕಿರಿಯ ಆಟಗಾರರೊಂದಿಗೆ ಮುಂದುವರೆಯುವುದು ಕಷ್ಟ. ಆದರೂ 39 ವರ್ಷದವನಾದ ನನಗೆ ಇದೊಂದು ದೊಡ್ಡ ಪಾಸಿಟಿವ್ ವಿಷಯ. ಯಾಕೆಂದರೆ, ಅವರು ನನ್ನ ಫಿಟ್ನೆಸ್ ಬಗ್ಗೆ ಬೆರಳು ತೋರಿಸಲು ಆಗುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 39 ವರ್ಷದ ಧೋನಿ, ವಯಸ್ಸಾಗುವುದು ಮತ್ತು ಫಿಟ್ ಆಗಿರುವುದು ಎರಡೂ ಕಷ್ಟದ ಸಂಗತಿ ಎಂದರು.
ನೀವು ಆಡುತ್ತಿರುವಾಗ, ಅವನು ಅನ್ಫಿಟ್ ಎಂದು ಯಾರಾದರೂ ಹೇಳುವುದನ್ನು ನೀವು ನಿಜವಾಗಿಯೂ ಬಯಸುವುದಿಲ್ಲ. ನಾನು ಕಿರಿಯ ಹುಡುಗರೊಂದಿಗೆ ಮುಂದುವರಿಯಬೇಕು, ಅವರು ತುಂಬಾ ಫಾಸ್ಟ್ ಇದ್ದಾರೆ, ಅವರಿಗೆ ಸವಾಲು ಹಾಕುವುದು ಒಂದು ರೀತಿ ಒಳ್ಳೆಯ ವಿಷಯ ಎಂದು ಧೋನಿ ಹೇಳುತ್ತಾರೆ.
ಆಟದಲ್ಲಿ ಉತ್ತಮ ಪ್ರದರ್ಶನ ಒಂದು ರೀತಿಯ ನಂಬಿಕೆ. ನಾನು 24 ವರ್ಷವನಿದ್ದಾಗ ನೀಡಿದ ಪ್ರದರ್ಶನದ ರೀತಿ ನಾನು 40 ವರ್ಷದವನಾದಾಗ ನೀಡುತ್ತೇನೆಂಬ ನಂಬಿಕೆ ಇಲ್ಲ. ಇದಕ್ಕಾಗಿ ಜನರು ನನ್ನ ಕಡೆ ಬೆರಳು ತೋರಿಸಿ ಅವನು ಅನ್ಫಿಟ್ ಅಂದರೆ, ಅದು ನನಗೆ ದೊಡ್ಡ ಪಾಸಿಟಿವ್ ಇದ್ದ ಹಾಗೆ" ಎಂದು ಮಾಹಿ ತಿಳಿಸಿದ್ದಾರೆ.