ಕರ್ನಾಟಕ

karnataka

ETV Bharat / sports

ಜನರು ಟೀಕಿಸುತ್ತಾರೆಂದು ನಾನು ಬದಲಾಗುವ ಅವಶ್ಯಕತೆಯಿಲ್ಲ: ವೃದ್ಧಿಮಾನ್ ಸಹಾ

2014ರ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಕೇವಲ ನೀರು, ಬ್ಯಾಟ್ ಮತ್ತು ಗ್ಲೌಸ್ ತಂದುಕೊಡುವುದಕ್ಕೆ ಸೀಮಿತವಾದರು. 2018ರಲ್ಲಿ ಗಾಯದಿಂದ ಹೊರಬಿದ್ದಿದ್ದರು. ಇದೀಗ 2021ರಲ್ಲಿ ಮತ್ತೆ ಅದೇ ಸ್ಥಾನದಲ್ಲಿದ್ದಾರೆ. ವಿಕೆಟ್​ ಕೀಪಿಂಗ್ ವಿಚಾರದಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಎನಿಸಿಕೊಂಡಿರುವ ಸಹಾ ಬ್ಯಾಟಿಂಗ್ ವಿಚಾರದಲ್ಲಿ ಮಾತ್ರ ಟೀಕೆಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ. ಆದರೆ, ಇಂತಹ ಟೀಕೆಗಳಿಂದ ನಾನು ಬದಲಾಗಬೇಕಿಲ್ಲ ಎಂದು ಸಹಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವೃದ್ಧಿಮಾನ್ ಸಹಾ
ವೃದ್ಧಿಮಾನ್ ಸಹಾ

By

Published : May 22, 2021, 4:46 PM IST

ಕೋಲ್ಕತ್ತಾ:ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ದಶಕಗಳೇ ಕಳೆಯುತ್ತಿದ್ದರೂ ವೃದ್ಧಿಮಾನ್ ಸಹಾ ಮಾತ್ರ ತಂಡದಲ್ಲಿ ಎರಡನೇ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಆಗಿಯೇ ಉಳಿದುಕೊಂಡಿದ್ದಾರೆ. 2011ರಲ್ಲಿ ಧೋನಿಗೆ, ಇಂದು ರಿಷಂಬ್ ಪಂತ್​ಗೆ ಬ್ಯಾಕ್​ ಅಪ್ ಆಗಿಯೇ ತಂಡದಲ್ಲಿದ್ದಾರೆ. ಆದರೆ, ಇದರಿಂದ ಅವರಿಗೆ ಯಾವುದೇ ಬೇಸರವಿಲ್ಲ ಅವಕಾಶ ಸಿಕ್ಕಾಗ ಸಾಮರ್ಥ್ಯ ನೀಡುವುದರ ಕಡೆಗೆ ನನ್ನ ಗಮನ ಎಂದಿದ್ದಾರೆ.

2014ರ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಕೇವಲ ನೀರು, ಬ್ಯಾಟ್ ಮತ್ತು ಗ್ಲೌಸ್ ತಂದುಕೊಡುವುದಕ್ಕೆ ಸೀಮಿತವಾದರು. 2018ರಲ್ಲಿ ಗಾಯದಿಂದ ಹೊರಬಿದ್ದಿದ್ದರು. ಇದೀಗ 2021ರಲ್ಲಿ ಮತ್ತೆ ಅದೇ ಸ್ಥಾನದಲ್ಲಿದ್ದಾರೆ. ವಿಕೆಟ್​ ಕೀಪಿಂಗ್ ವಿಚಾರದಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಎನಿಸಿಕೊಂಡಿರುವ ಸಹಾ ಬ್ಯಾಟಿಂಗ್ ವಿಚಾರದಲ್ಲಿ ಮಾತ್ರ ಟೀಕೆಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ. ಆದರೆ, ಇಂತಹ ಟೀಕೆಗಳಿಂದ ನಾನು ಬದಲಾಗಬೇಕಿಲ್ಲ ಎಂದು ಸಹಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

" ಖಂಡಿತವಾಗಿ, ನೀವು ಉತ್ತಮವಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ ಟೀಕೆಗಳು ಸಾಮಾನ್ಯವಾಗಿರುತ್ತವೆ. ಆದರೆ, ನಾನು ಕಳೆದ ಕೆಲವು ವರ್ಷಗಳಿಂದ ಕಲಿಯುತ್ತಿರುವೆ, ದಾರಿ ತಲುಪಲು ಯಾವಾಗಲೂ ಪ್ರಯತ್ನಿಸುತ್ತೇನೆ" ಎಂದು ಸಹಾ ಹೇಳಿದ್ದಾರೆ.

" ಜನರು ನನ್ನ ಬ್ಯಾಟಿಂಗ್ ಉತ್ತಮವಾಗಿಲ್ಲ ಎಂದು ಹೇಳುತ್ತಿದ್ದರೆ, ಬಹುಶಃ ಅವರ ಪ್ರಕಾರ ಇರಬಹುದು. ಆದರೆ, ಅವರ ಟೀಕೆಗಾಗಿ ನಾನು ಬದಲಾಗಬೇಕಿದೆ ಎಂದು ಭಾವಿಸುವುದಿಲ್ಲ. ನನ್ನ ಗಮನವೇನಿದ್ದರೂ ಮಾನಸಿಕ ಸ್ಥಿತಿ ಮತ್ತು ತಂತ್ರಗಾರಿಕೆಯನ್ನು ಉಳಿಸಿಕೊಳ್ಳಲು ಹಾಗೂ ಅದಕ್ಕಾಗಿ ಶ್ರಮಿಸಲು ಪ್ರಯತ್ನಿಸುತ್ತೇನೆ " ಎಂದು ಈಗಷ್ಟೇ ಕೋವಿಡ್​ನಿಂದ ಚೇತರಿಸಿಕೊಂಡಿರುವ ಬಂಗಾಳ ಕೀಪರ್​ ಹೇಳಿದ್ದಾರೆ.

ಧೋನಿ ನಿವೃತ್ತಿಯ ನಂತರ ಸಹಾ ಆ ಸ್ಥಾನಕ್ಕೆ ಬಂದರು, ಆದರೆ 2018ರಲ್ಲಿ ಗಾಯದ ಕಾರಣ ಸಂಪೂರ್ಣ ಆವೃತ್ತಿಯನ್ನು ಕಳೆದುಕೊಂಡರು. ಈ ವೇಳೆ, ತಂಡದಲ್ಲಿ ಪಾರ್ಥೀವ್ ಪಟೇಲ್, ದಿನೇಶ್ ಕಾರ್ತಿಕ್ ಮತ್ತು ಪಂತ್ ಅವಕಾಶ ಪಡೆದರು. ಆದರೆ ಪಂತ್ ಮಾತ್ರ ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಸಹಾ ಭಾರತದ ಪರ 38 ಟೆಸ್ಟ್​ ಪಂದ್ಯವನ್ನಾಡಿದ್ದಾರೆ. ಅವರು 3 ಶತಕಗಳ ಸಹಿತ 1251 ರನ್​ಗಳಿಸಿರುವ ಅವರು ವಿಕೆಟ್​ ಹಿಂದೆ 103 ಬಲಿ ಪಡೆದಿದ್ದಾರೆ.

ಇದನ್ನು ಓದಿ: ನಾನು ಕಾಯುತ್ತೇನೆ; WTC ಫೈನಲ್​ನಲ್ಲಿ ಪಂತ್​​ ವಿಕೆಟ್​ ಕೀಪರ್​ ಆಗಲಿ: ವೃದ್ಧಿಮಾನ್​

ABOUT THE AUTHOR

...view details