ಕರ್ನಾಟಕ

karnataka

ETV Bharat / sports

ಟೀಕೆಗಳಿಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ: ಶಿಖರ್ ಧವನ್ - ಈಟಿವಿ ಭಾರತ ಕನ್ನಡ

ಜನ ಮಾತಾಡಿದ್ದಕ್ಕೆಲ್ಲ ತಲೆಕೆಡಿಸಿಕೊಂಡಿದ್ದರೆ ನಾನು ಇವತ್ತು ಇಲ್ಲಿರುತ್ತಿರಲಿಲ್ಲ. ನನಗೆ ಅನುಭವವಿರುವುದರಿಂದ ಅಂಥ ಹೆದರಿಕೆಯೇನಿಲ್ಲ. ಎಲ್ಲಿಯವರೆಗೆ ನನ್ನನ್ನು ನಾನು ಸುಧಾರಿಸಿಕೊಳ್ಳುವೆನೋ ಬೇರಾವುದೂ ಗಣನೆಗೆ ಬರಲ್ಲ ಎಂದರು ಶಿಖರ್ ಧವನ್

I don't feel odd, I have heard it for 10 years: Dhawan on criticism
I don't feel odd, I have heard it for 10 years: Dhawan on criticism

By

Published : Jul 22, 2022, 5:36 PM IST

ಪೋರ್ಟ್ ಆಫ್ ಸ್ಪೇನ್: ಕಿರಿಯ ಆಟಗಾರರ ತೀವ್ರ ಪೈಪೋಟಿಯ ನಡುವೆ, ಕಳೆದ 10 ವರ್ಷಗಳ ಅವಧಿಯಲ್ಲಿ ತಮ್ಮ ಫಾರ್ಮ್‌ನ ಬಗ್ಗೆ ಕೇಳಿ ಬಂದ ಟೀಕೆ ಟಿಪ್ಪಣಿಗಳಿಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಹೇಳಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಸಮಾನವಾಗಿ ಬ್ಯಾಟಿಂಗ್ ಪ್ರತಿಭೆಯನ್ನು ಹೊಂದಿರುವ ಧವನ್, ವೆಸ್ಟ್ ಇಂಡೀಸ್​ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಬಹುತೇಕ ಹೊಸಬರೇ ಇದ್ದಾರೆ.

ಸರಣಿಯ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಧವನ್, 10 ವರ್ಷಗಳೇ ಕಳೆದಿವೆ, ಟೀಕೆಗಳು ಹೊಸದೆನಿಸಲ್ಲ. ಜನ ಮಾತನಾಡುತ್ತಲೇ ಇರುತ್ತಾರೆ, ನಾನು ಸಾಧನೆ ಮಾಡುತ್ತಲೇ ಇರುತ್ತೇನೆ. ಜನ ಮಾತಾಡಿದ್ದಕ್ಕೆಲ್ಲ ತಲೆಕೆಡಿಸಿಕೊಂಡಿದ್ದರೆ ನಾನು ಇವತ್ತು ಇಲ್ಲಿರುತ್ತಿರಲಿಲ್ಲ. ನನಗೆ ಅನುಭವವಿರುವುದರಿಂದ ಅಂಥ ಹೆದರಿಕೆಯೇನಿಲ್ಲ. ಎಲ್ಲಿಯವರೆಗೆ ನನ್ನನ್ನು ನಾನು ಸುಧಾರಿಸಿಕೊಳ್ಳುವೆನೋ ಬೇರಾವುದೂ ಗಣನೆಗೆ ಬರಲ್ಲ ಎಂದು ಹೇಳಿದರು.

ನಾನೊಬ್ಬ ತುಂಬಾ ಸಕಾರಾತ್ಮಕ ಆಲೋಚನೆಯ ವ್ಯಕ್ತಿ. ನನ್ನನ್ನು ನಾನು ನಂಬುವುದೇ ನನ್ನ ಸಕಾರಾತ್ಮಕ ಶಕ್ತಿಯಾಗಿದೆ. ನಾನು ಆಡಲಾರಂಭಿಸಿದ ಕಾಲದಿಂದಲೂ ಆ ವಿಶ್ವಾಸ ನನ್ನಲ್ಲಿದೆ. ಇದೇ ಸಕಾರಾತ್ಮಕತೆಯನ್ನು ನಾನು ಕಿರಿಯರೊಂದಿಗೂ ಹಂಚಿಕೊಳ್ಳಲು ಬಯಸುತ್ತೇನೆ ಎಂದರು ಧವನ್. ಕಳಪೆ ಫಾರ್ಮ್‌ನಿಂದಾಗಿ ಕಳೆದ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಧವನ್, ಏಕದಿನ ತಂಡದಲ್ಲಿ ತಮ್ಮನ್ನು ತಾವು ಮರುಸ್ಥಾಪಿಸುವ ಭರವಸೆಯಲ್ಲಿದ್ದಾರೆ.

ABOUT THE AUTHOR

...view details