ಅಹ್ಮದಾಬಾದ್: ಭಾರತ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅವಶ್ಯಕತೆಯಿದ್ದು, ಮ್ಯಾನೇಜ್ಮೆಂಟ್ ಬಯಸಿದರೆ ನಾನು ಬೌಲಿಂಗ್ ಮಾಡುವುದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸೂರ್ಯ ನಾನು ಬೌಲಿಂಗ್ನಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲೆ, ಯಾವಾಗ ಅವಕಾಶ ಸಿಕ್ಕರೂ ನಾನು ಬೌಲಿಂಗ್ ಮಾಡುತ್ತೇನೆ. ನಾನು ನಿಯಮಿತವಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಹಾಗಾಗಿ ಮ್ಯಾನೇಜ್ಮೆಂಟ್ ಯಾವಾಗ ಬಯಸಿದರೂ ನನ್ನನ್ನು ಬೌಲರ್ ಆಗಿ ಬಳಸಿಕೊಳ್ಳಬಹುದು ಎಂದು ಮುಂಬೈ ಬ್ಯಾಟರ್ ತಿಳಿಸಿದ್ದಾರೆ.
ಹೋಲಿಕೆ ಇಷ್ಟಪಡಲ್ಲ:ಮೈಕಲ್ ಬೆವೆನ್ ಅವರೊಂದಿಗೆ ಹೋಲಿಕೆ ಮಾಡುವುದರ ಬಗ್ಗೆ ಅಭಿಪ್ರಾಯ ಕೇಳಿದಾಗ, ನಾನು ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ನಾನು ಕಷ್ಟಪಟ್ಟು ಸೂರ್ಯಕುಮಾರ್ ಯಾದವ್ ಆಗಿರುವುದಕ್ಕೆ ಇಷ್ಟಪಡುತ್ತೇನೆ. ಭಾರತಕ್ಕಾಗಿ 5-7 ಪಂದ್ಯಗಳನ್ನು ಆಡಿದ್ದೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಬ್ಯಾಟಿಂಗ್ ಮಾಡುತ್ತೇನೆ ಮತ್ತು ತಂಡವನ್ನು ಗೆಲ್ಲಿಸಲು ಪ್ರಯತ್ನಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.