ಅಬಿಧಾಬಿ: ಕೆಕೆಆರ್ ವಿರುದ್ಧ ಐಪಿಎಲ್ನಲ್ಲಿ ದಾಖಲೆಯ 200ನೇ ಪಂದ್ಯವನ್ನಾಡುತ್ತಿರುವ ನಾಯಕ ವಿರಾಟ್ ಕೊಹ್ಲಿಗೆ ಆರ್ಸಿಬಿ ಆಟಗಾರರು ಹಾಗೂ ಕೋಚ್ಗಳು ಮನ ತುಂಬಿ ಹರಸಿದ್ದಾರೆ.
ವಿರಾಟ್ ಕೊಹ್ಲಿ 2008ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 199 ಪಂದ್ಯಗಳಿಂದ 6076 ರನ್ ಗಳಿಸಿ ಐಪಿಎಲ್ನಲ್ಲಿ ಗರಿಷ್ಠ ರನ್ ಗಳಿಕೆಯಲ್ಲಿ ಟಾಪರ್ ಆಗಿದ್ದಾರೆ. 5 ಶತಕ 40 ಅರ್ಧಶತಕ ಬಾರಿಸಿದ್ದಾರೆ. ಇವರ ನಾಯಕತ್ವದಲ್ಲಿ 2016ರಲ್ಲಿ ಒಮ್ಮೆ ಆರ್ಸಿಬಿ ಫೈನಲ್ ಕೂಡ ತಲುಪಿತ್ತು.
ಹೇ ಸ್ಕಿಪ್, ಅರ್ಸಿಬಿ ಪರ ನಿಮ್ಮ 200ನೇ ಪಂದ್ಯಕ್ಕಾಗಿ ಅಭಿನಂದನೆಗಳು. ಇದೊಂದು ಅದ್ಭುತವಾದ ಸಾಧನೆ. ಫ್ರಾಂಚೈಸಿಗಾಗಿ ನಿಮ್ಮ 200ನೇ ಪಂದ್ಯದಲ್ಲಿ ನಿಮ್ಮೊಂದಿಗೆ ಮೈದಾನಕ್ಕೆ ತೆರಳಲು ನಮಗೆ ಬಹಳ ಖುಷಿ ಮತ್ತು ತುಂಬಾ ಹೆಮ್ಮೆ ಇದೆ.
ಈ ತಂಡಕ್ಕೆ ನೀವು ಸಂಪೂರ್ಣ ದಂತಕಥೆ. ಈ ತಂಡಕ್ಕಾಗಿ ನೀವು ಮಾಡುವ ಪ್ರತಿಯೊಂದನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ "ಎಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಡಿವಿಲಿಯರ್ಸ್ ಹೇಳಿದರು.
ಮುಖ್ಯ ಕೋಚ್ ಮೈಕ್ ಹೆಸನ್, ಅಭಿನಂದನೆಗಳು ವಿರಾಟ್ ಭಾಯ್, ಖಂಡಿತವಾಗಿ ಇದೊಂದು ಅಮೋಘ ಸಾಧನೆ. ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯಗಳನ್ನಾಡುತ್ತಿರುವುದು ನಿಮ್ಮ ಬದ್ಧತೆ ಮತ್ತು ನಿಷ್ಠೆಯನ್ನು ತೋರುತ್ತದೆ. ನೀವು ನಮ್ಮ ತಂಡದ ಭಾಗವಾಗಿರುವುದಕ್ಕೆ ಅಪಾರ ಗರ್ವ ಪಡುತ್ತೇವೆ.
ನೀವು ಯಾವಾಗಲೂ ತಂಡಕ್ಕಾಗಿ ಆಡುತ್ತೀರಿ, ನೀವು ನಂಬಲಸಾಧ್ಯವಾದ ನಿಸ್ವಾರ್ಥ ವ್ಯಕ್ತಿ. ನೀವು ಸೃಷ್ಟಿಸುವ ವಾತಾವರಣ ಎದುರಾಳಿಗೆ ನಿಬಾಯಿಸಲು ಕಷ್ಟಕರವಾಗಿರುತ್ತದೆ. ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ನೀವು ನಿಸ್ವಾರ್ಥಿ.
ತಂಡಕ್ಕಾಗಿ 3ನೇ ಕ್ರಮಾಂಕ ಅಥವಾ ಇನ್ನಿಂಗ್ಸ್ ಆರಂಭಿಸಬೇಕೆಂದರೆ ನೀವು ಯಾವಾಗಲೂ ಅದಕ್ಕೆ ಸಿದ್ಧರಾಗಿರುತ್ತೀರಿ ಎಂದು ಆರ್ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಸ್ಪಿನ್ನರ್ ಯುಜ್ವೆಂದ್ರ ಚಹಲ್ ಕೂಡ ನಾಯಕನಿಗೆ ಅಭಿನಂದನೆ ಸಲ್ಲಿಸಿದ್ದು, ಆರ್ಸಿಬಿ ಪರ 350 ರಿಂದ 400 ಪಂದ್ಯಗಳನ್ನಾಡುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಆರ್ಸಿಬಿ ಪರ 200ನೇ ಪಂದ್ಯವನ್ನಾಡುವ ಮೂಲಕ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ..