ದುಬೈ:ಏಷ್ಯಾ ಕಪ್ ಟೂರ್ನಮೆಂಟ್ನಲ್ಲಿ ನಿನ್ನೆ ಭಾರತ-ಹಾಂಗ್ ಕಾಂಗ್ ಮುಖಾಮುಖಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 40 ರನ್ಗಳ ಗೆಲುವು ದಾಖಲಿಸಿದ್ದು, ಸೂಪರ್ 4 ಹಂತಕ್ಕೆ ಲಗ್ಗೆ ಹಾಕಿದೆ. ಇದರ ಮಧ್ಯೆ ಹಾಂಗ್ ಕಾಂಗ್ ಪ್ಲೇಯರ್ ತನ್ನ ಪ್ರಿಯತಮೆಗೆ ಸರ್ಪ್ರೈಸ್ ಪ್ರಪೋಸ್ ಮಾಡಿದ್ದು ಗಮನ ಸೆಳೆಯಿತು.
ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಹೋರಾಡಿ ಸೋತಿರುವ ಹಾಂಗ್ ಕಾಂಗ್ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ನಂತರ ಕ್ರೀಡಾಂಗಣದ ಗ್ಯಾಲರಿಗೆ ಆಗಮಿಸಿದ ಬ್ಯಾಟರ್ ಕಿಂಚತ್ ಶಾ, ಸ್ನೇಹಿತೆಗೆ ವಿಭಿನ್ನವಾಗಿ ಪ್ರಪೋಸ್ ಮಾಡಿದರು. ಗೆಳೆಯನ ನಿರ್ಧಾರಕ್ಕೆ ಅರೆಕ್ಷಣ ಅಚ್ಚರಿ ವ್ಯಕ್ತಪಡಿಸಿದ ಆಕೆ ನಂತರ ಸಂತೋಷದಿಂದ ಅಪ್ಪಿಕೊಂಡರು.
ಇದನ್ನೂ ಓದಿ:CSK - RCB ಪಂದ್ಯದ ವೇಳೆ ಅಪರೂಪದ ಘಟನೆ.. ಆರ್ಸಿಬಿ ಜೆರ್ಸಿ ತೊಟ್ಟು ಲವ್ ಪ್ರಪೋಸ್ ಮಾಡಿದ ಯುವತಿ!