ದುಬೈ: ಟಿ-20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹಾಲಿ ಚಾಂಪಿಯನ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಎಡಗೈ ಸೀಮರ್ ಒಬೆಡ್ ಮೆಕಾಯ್ ಗಾಯಗೊಂಡಿದ್ದು, ಅವರ ಬದಲಿಗೆ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಮೆಕಾಯ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಹೋಲ್ಡರ್ರನ್ನು ಸೇರಿಸಿಕೊಳ್ಳುವುದಕ್ಕೆ ವಿಂಡೀಸ್ ಮಾಡಿದ್ದ ಮನವಿಯನ್ನು ಐಸಿಸಿ ಮಾನ್ಯ ಮಾಡಿದೆ. ಹೋಲ್ಡರ್ ಈಗಾಗಲೆ ಐಪಿಎಲ್ಗಾಗಿ ಯುಎಇಯಲ್ಲೇ ಇದ್ದರು. ಜೊತೆಗೆ ಅವರು ವಿಂಡೀಸ್ ವಿಶ್ವಕಪ್ ತಂಡದ ಮೀಸಲು ಪಡೆಯಲ್ಲಿ ಅವಕಾಶ ಪಡೆದಿದ್ದರಿಂದ ಯಾವುದೇ ಕ್ವಾರಂಟೈನ್ ಇಲ್ಲದೆ ತಂಡಕ್ಕೆ ಸೇರಿಕೊಂಡಿದ್ದಾರೆ.