ಕರ್ನಾಟಕ

karnataka

ETV Bharat / sports

ಹೈಕೋರ್ಟ್‌ನಿಂದ ಬಿಸಿಸಿಐಗೆ ನ್ಯಾಯಾಂಗ ನಿಂದನೆ ನೋಟಿಸ್‌

ಡಿಸೆಂಬರ್‌ 7ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಅರ್ಜಿದಾರರಿಗೂ ಪ್ರವೇಶ ನೀಡುವಂತೆ ಬಿಸಿಸಿಐಗೆ ಸೂಚಿಸಿತ್ತು. ಆದರೆ, ಕೋರ್ಟ್‌ ಆದೇಶವನ್ನು ಯುಟಿಸಿಎ ಉಲ್ಲಂಘಿಸಿದೆ ಎಂದು ನೋಟಿಸ್‌ ಜಾರಿ ಮಾಡಿದೆ..

By

Published : Dec 14, 2021, 1:42 PM IST

High Court issues contempt notice to BCCI
ಪಂಜಾಬ್‌-ಹರಿಯಾಣ ಹೈಕೋರ್ಟ್‌ನಿಂದ ಬಿಸಿಸಿಐಗೆ ನ್ಯಾಯಾಂಗ ನಿಂದನೆ ನೋಟಿಸ್‌

ನವದೆಹಲಿ :ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಪಂಜಾಬ್‌-ಹರಿಯಾಣ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ. ಕೋರ್ಟ್‌ ಆದೇಶದ ಹೊರತಾಗಿಯೂ ಕೋಚಿಂಗ್‌ ಸರ್ಟಿಫಿಕೇಶನ್‌ ಕೋರ್ಸ್‌ಗಳಿಗೆ ಪ್ರವೇಶ ನೀಡಿರುವ ಆರೋಪ ಬಿಸಿಸಿಐ ವಿರುದ್ಧ ಕೇಳಿ ಬಂದಿದೆ.

ಡಿಸೆಂಬರ್ 6 ರಿಂದ 12ರವರೆಗೆ ಬಿಸಿಸಿಐ ಮತ್ತು ಚಂಡೀಗಢ ಕ್ರಿಕೆಟ್ ಅಕಾಡೆಮಿಯಿಂದ ಹೈಬ್ರಿಡ್ ಲೆವೆಲ್ 1 ಸರ್ಟಿಫಿಕೇಶನ್ ಕೋರ್ಸ್‌ಗೆ ಜಾಹೀರಾತು ನೀಡಿತ್ತು. ಅರ್ಜಿದಾರ ಶಾನವಾಜ್ ಖಾನ್ ಈ ಕೋರ್ಸ್‌ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಚಂಡೀಗಢದ ಕೇಂದ್ರಾಡಳಿತ ಪ್ರದೇಶ ಕ್ರಿಕೆಟ್ ಸಂಸ್ಥೆ-ಯುಟಿಸಿಎ ಸ್ವೀಕರಿಸಿರಲಿಲ್ಲ. ಈ ಸಂಬಂಧ ಶಾನವಾಜ್‌ ಕೋರ್ಟ್‌ ಮೊರೆ ಹೋಗಿದ್ದರು.

ಡಿಸೆಂಬರ್‌ 7ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಅರ್ಜಿದಾರರಿಗೂ ಪ್ರವೇಶ ನೀಡುವಂತೆ ಬಿಸಿಸಿಐಗೆ ಸೂಚಿಸಿತ್ತು. ಆದರೆ, ಕೋರ್ಟ್‌ ಆದೇಶವನ್ನು ಯುಟಿಸಿಎ ಉಲ್ಲಂಘಿಸಿದೆ ಎಂದು ನೋಟಿಸ್‌ ಜಾರಿ ಮಾಡಿದೆ.

ಹೈಕೋರ್ಟ್‌ ನ್ಯಾಯಮೂರ್ತಿ ಹೆಚ್‌ಎಸ್ ಸಿಧು ಅವರನ್ನೊಳಗೊಂಡ ಪೀಠವು ಡಿಸೆಂಬರ್ 22ರೊಳಗೆ ಪ್ರತಿಕ್ರಿಯೆ ನೀಡುವಂತೆ ಬಿಸಿಸಿಐಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್‌ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!

ABOUT THE AUTHOR

...view details