ಕರ್ನಾಟಕ

karnataka

ETV Bharat / sports

ನಾ ಹೆಚ್ಚು ಪ್ರೀತಿಸುವ ಭಾರತದ ಪರಿಸ್ಥಿತಿ ನೋಡಿ ಹೃದಯ ಛಿದ್ರವಾಗುತ್ತಿದೆ : ಕೆವಿನ್ ಪೀಟರ್​ಸನ್ - Kevin Pietersen Reacts On India’s Covid SituationIPL 2021 Gets Suspended

ಭಾರತದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು..

ಕೆವಿನ್ ಪೀಟರ್​ಸನ್
ಕೆವಿನ್ ಪೀಟರ್​ಸನ್

By

Published : May 4, 2021, 5:47 PM IST

ನವದೆಹಲಿ: ಭಾರತದಲ್ಲಿ ಕೊರೊನಾದಿಂದ ಜನರು ಎದುರಿಸುತ್ತಿರುವ ಸಾವು-ನೋವುಗಳನ್ನು ನೋಡಿ ನನ್ನ ಹೃದಯ ಒಡೆದಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್​ಸನ್​ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ಎರಡು ವಾರಗಳಿಂದ ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿವೆ. ಸಾವಿರಾರು ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮಂಗಳವಾರ ಸ್ಥಗಿತಗೊಂಡಿದೆ. ಪ್ರಸ್ತುತ ಭಾರತದ ಸ್ಥಿತಿ ನೋಡಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟ್​ಟೇಟರ್ ಕೆವಿನ ಪೀಟರ್ಸನ್​ ಮರುಕ ವ್ಯಕ್ತಪಡಿಸಿದ್ದಾರೆ.

ಭಾರತವು ನಾನು ತುಂಬಾ ಪ್ರೀತಿಸುವ ದೇಶದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು" ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್​ನ ಮುಂದೂಡಿದ ನಂತರ ಪೀಟರ್​ಸನ್​ ಈ ಟ್ವೀಟ್ ಮಾಡಿದ್ದಾರೆ. ಕೆಕೆಆರ್​ ಮತ್ತು ಸಿಎಸ್​ಕೆ ಬಳಗದಲ್ಲಿ ಕೆಲವು ಕ್ರಿಕೆಟಿರು ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ತಕ್ಷಣದಲ್ಲೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಇದನ್ನು ಓದಿ:ಕೊರೊನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆನ್​ಡಾರ್ಫ್​​

ABOUT THE AUTHOR

...view details