ತರೌಬಾ (ವೆಸ್ಟ್ ಇಂಡೀಸ್): ವಿಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಪಡೆದ ಅಮೂಲ್ಯವಾದ ಬ್ಯಾಟಿಂಗ್ ಇನ್‌ಪುಟ್‌ಗೆ ಕಾರಣವೆಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನಗಳಲ್ಲಿ 5 ಮತ್ತು 7 ರನ್‌ಗಳಿಗೆ ಔಟಾದ ನಂತರ, ಪಾಂಡ್ಯ ನಿರ್ಣಾಯಕ ಪಂದ್ಯದಲ್ಲಿ ಗಮನಾರ್ಹ ಪುನರಾಗಮನವನ್ನು ಮಾಡಿದರು. 52 ಎಸೆತಗಳಲ್ಲಿ ಅಜೇಯ 70 ರನ್ಗಳಿಸಿದ ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ ಒಳಗೊಂಡಿತ್ತು. ಇದರಿಂದ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 351 ಕೆಲ ಹಾಕಲು ಸಾಧ್ಯವಾಯಿತು.
ಭಾರತದ ಪರ ಕಿಶನ್, ಗಿಲ್, ಸಂಜು ಸ್ಯಾಮ್ಸನ್ ಅವರ ಅರ್ಧಶತಕಗಳೂ ನಾಯಕ ಹಾರ್ದಿಕ್ ಸ್ಕೋರ್ಗೆ ಸೇರಿದ್ದರಿಂದ ದೊಡ್ಡ ಮೊತ್ತ ಒಟ್ಟಾಗಿತ್ತು. ಇದನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ 35.3 ಓವರ್ನಲ್ಲಿ 151 ರನ್ಗೆ ಆಲ್ಔಟ್ ಆಗಿ ಸರಣಿಯನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಎರಡನೇ ಪಂದ್ಯದಂತೆ ಮೂರನೇ ಮ್ಯಾಚ್ನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು.
"ನಾನು ಒಂದೆರಡು ದಿನಗಳ ಹಿಂದೆ ವಿರಾಟ್ ಅವರೊಂದಿಗೆ ಬಹಳ ಅದ್ಭುತವಾದ ಚರ್ಚೆಗಳನ್ನು ಮಾಡಿದ್ದೇನೆ. ತಂಡದಲ್ಲಿ ನನ್ನನ್ನು ಕೆಲ ವರ್ಷಗಳಿಂದ ಕಂಡಿರುವ ಮಾಜಿನಾಯಕ ವಿರಾಟ್ ಕೊಹ್ಲಿ ನನಗೆ ಕೆಲ ಉತ್ತಮ ಸಲಹೆಗಳನ್ನು ನೀಡಿದರು. ನಾನು ಸುಮಾರು ಏಳೆಂಟು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ, ವಿರಾಟ್ ನನ್ನನ್ನು ಮೊದಲ ದಿನದಿಂದ ನೋಡುತ್ತಿದ್ದಾರೆ. ಮಾತುಕತೆ ವೇಳೆ ವಿರಾಟ್ ಅವರು ಕೆಲವು ಪಾಯಿಂಟರ್‌ಗಳನ್ನು ಹೇಳಿದ್ದರು ಅದು ನನಗೆ ನಿಜವಾಗಿಯೂ ಸಹಾಯ ಮಾಡಿತು" ಎಂದು ಪಂದ್ಯದ ಮಾತನಾಡುವಾಗ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್ ಹೇಳಿಕೊಂಡಿದ್ದಾರೆ.