ಜೈಪುರ್:ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ತಮಿಳುನಾಡು - ಹಿಮಾಚಲ ಪ್ರದೇಶ ಮುಖಾಮುಖಿಯಾಗಲಿದ್ದು, ಆಲ್ರೌಂಡ್ ಆಟದಿಂದ ಗಮನ ಸೆಳೆದಿರುವ ಟೀಂ ಇಂಡಿಯಾದ ಮಾಜಿ ಆಟಗಾರ ರಿಷಿ ಧವನ್ ನೇತೃತ್ವದ ಹಿಮಾಚಲ ಪ್ರದೇಶ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ 77 ರನ್ಗಳ ಅಂತರದಿಂದ ಹಿಮಾಚಲ ಪ್ರದೇಶ ಗೆಲುವು ದಾಖಲು ಮಾಡಿದ್ರೆ, ಸೌರಾಷ್ಟ್ರ ವಿರುದ್ಧ ತಮಿಳುನಾಡು ಕೊನೆ ಎಸೆತದಲ್ಲಿ ಜಯ ಸಾಧಿಸುವ ಮೂಲಕ ಫೈನಲ್ಗೆ ಲಗ್ಗೆ ಹಾಕಿದೆ.
ಫೈನಲ್ ಪಂದ್ಯದಲ್ಲಿ ತಮಿಳುನಾಡು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ಆದರೆ ಟೂರ್ನಿ ಉದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿರುವ ಹಿಮಾಚಲ ಪ್ರದೇಶ ಗೆಲುವಿನ ಲೆಕ್ಕಾಚಾರದೊಂದಿಗೆ ಮೈದಾನಕ್ಕಿಳಿಯಲಿದೆ.
ಈಗಾಗಲೇ ಕರ್ನಾಟಕ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಸಾಧಿಸಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಗೆದ್ದಿರುವ ತಮಿಳುನಾಡು, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಗೆಲುವು ಸಾಧಿಸುವ ಮೂಲಕ ಈ 2021ಕ್ಕೆ ಗುಡ್ಬೈ ಹೇಳಲು ಸಜ್ಜಾಗಿದೆ.
ಜೈಪುರ್ದ ಸವಾಯಿ ಮಾನಸಿಂಗ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಫೈನಲ್ ಪಂದ್ಯ ಆರಂಭಗೊಳ್ಳಲಿದ್ದು, ಇದಕ್ಕಾಗಿ ಉಭಯ ತಂಡಗಳು ಅಂತಿಮ ಹಂತದ ಅಭ್ಯಾಸದಲ್ಲಿ ಭಾಗಿಯಾಗಿವೆ.