ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಳ್ಳುವ ಮೂಲಕ ಭಾರತ ತಂಡ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳ ಚಾಣಾಕ್ಷತನದ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ನೆರವಿನಿಂದ ತಂಡ ಜಯ ಸಾಧಿಸಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಜುಗ್ರಾಜ್ ಹ್ಯಾಟ್ರಿಕ್ ಗೋಲು: 10-2 ರಿಂದ ದ.ಆಫ್ರಿಕಾ ಮಣಿಸಿದ ಭಾರತ ಹಾಕಿ ತಂಡ
ಪಂದ್ಯ ಗೆದ್ದ ಬಳಿಕ ಹೋಸ್ಟ್ ಬ್ರಾಡ್‌ಕಾಸ್ಟರ್ ಜೊತೆ ಮಾತನಾಡಿದ ಅವರು, ಸರಣಿ ನಮ್ಮ ಕೈವಶವಾಗಿದ್ದು ಖುಷಿಯಾಗಿದೆ. ಇಂದಿನ ಪಂದ್ಯ (2ನೇ ಏಕದಿನ ಪಂದ್ಯ)ದಲ್ಲಿ ನಮ್ಮ ಬೌಲಿಂಗ್ ಪ್ರದರ್ಶನ ಕೆಲಸ ಮಾಡಿದೆ. ಎದುರಾಳಿ ತಂಡದ ಆಟಗಾರರ ಒತ್ತಡ ಸಂದರ್ಭವನ್ನು ಅರ್ಥೈಸಿಕೊಂಡು ದಾಳಿ ಮಾಡುವುದು ಕಷ್ಟದ ಕೆಲಸ. ಪ್ರಸಿದ್ಧ್ ಆ ಕೆಲಸವನ್ನು ಮಾಡಿದರು ಎಂದರು.
ಸಂಕಷ್ಟದ ಪರಿಸ್ಥಿತಿಯಿಂದ ಟೀಂ ಇಂಡಿಯಾ ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಜೊತೆಯಾಟದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ ರೋಹಿತ್, ಅವರ ಪ್ರಬುದ್ಧತೆಯ ಆಟ ತಂಡಕ್ಕೆ ಭಾರಿ ವರದಾನವಾಯಿತು ಎಂದರು.
ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಇಳಿದ ಭಾರತದ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಬಳಿಕ ಕೆಎಲ್ ರಾಹುಲ್ (49) ಮತ್ತು ಸೂರ್ಯಕುಮಾರ್ ಯಾದವ್ (64) ಜೊತೆಯಾಟ ಪ್ರತಿಫಲವಾಗಿ 9 ವಿಕೆಟ್ ಕಳೆದುಕೊಂಡು ಭಾರತ 237 ರನ್ಗಳಿಸಿತ್ತು.
ಈ ಮೊತ್ತ ಬೆನ್ನು ಹತ್ತಿದ ಎದುರಾಳಿ ತಂಡ 44 ರನ್ಗಳಿಂದ ಸೋಲು ಕಂಡಿತು. ಪ್ರಸಿದ್ಧ್ ಕೃಷ್ಣ ಅವರ ನಾಲ್ಕು ವಿಕೆಟ್ಗಳ ನೆರವಿನಿಂದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಇನ್ನು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಶಿಖರ್ ಧವನ್ ಆಗಮನ ಮಾಡಲಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭಾರತದಲ್ಲಿ ನಾನು ಬಹಳ ದಿನಗಳಿಂದ ಇಂತಹ ಸ್ಪೆಲ್ ನೋಡಿರಲಿಲ್ಲ. ಪ್ರಸಿದ್ಧ್ ಬೌಲಿಂಗ್ ನೋಡಿ ಸ್ವಲ್ಪ ಆಶ್ಚರ್ಯವಾಯಿತು. ಇತರರು ಸಹ ಅವರ ಬೌಲಿಂಗ್ ಬಗ್ಗೆ ಹೊಗಳಿದ್ದಾರೆ ಎಂದ ರೋಹಿತ್, ಕೊನೆಯ ಪಂದ್ಯವನ್ನು ಕಳೆದುಕೊಳ್ಳಲು ನಮಗೆ ಮನಸ್ಸಿಲ್ಲ. ಹಾಗಾಗಿ ಮುಂಬುರುವ ಸವಾಲುಗಳನ್ನು ಎದುರಿಸಲು ತಂಡ ಸಿದ್ಧತೆ ನಡೆಸಲಿದೆ ಎಂದಿದ್ದಾರೆ.
ಇದನ್ನೂ ಓದಿ: ಮಿಂಚಿದ ಸೂರ್ಯ, ಕನ್ನಡಿಗ ಪ್ರಸಿಧ್: ವೆಸ್ಟ್ ಇಂಡೀಸ್ ವಿರುದ್ಧ 2-0ಯಲ್ಲಿ ಸರಣಿ ಗೆದ್ದ ಭಾರತ ತಂಡ
ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿ ಸ್ಥಾನ ಪಡೆದುಕೊಳ್ಳಲಿದ್ದು ಪರೀಕ್ಷಾರ್ಥವಾಗಿ ಕೆಲವು ಬದಲಾವಣೆ ಮಾಡಿಕೊಂಡು ಟೀಂ ಇಂಡಿಯಾ ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ಶುಕ್ರವಾರ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೇ ಅಂತಿಮ ಏಕದಿನ ಪಂದ್ಯ ನಡೆಯಲಿದೆ.