ಕರ್ನಾಟಕ

karnataka

ETV Bharat / sports

BCCIನಿಂದ ಯಾವುದೆ ಬೆದರಿಕೆಯಿಲ್ಲ, ಕಾಶ್ಮೀರ​ ಲೀಗ್​​ನಿಂದ ಹೊರಬಂದಿದ್ದು ನನ್ನ ನಿರ್ಧಾರ : ಪನೇಸರ್ - ಪಾಕ್ ಆಕ್ರಮಿತ ಕಾಶ್ಮೀರ

ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ವಿಷಯಕ್ಕಾಗಿ ವಿವಾದ ಇರುವುದರಿಂದ ನಾನು ಕೆಪಿಎಲ್​ನಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ. ಈ ವಿಷಯಗಳ ಮಧ್ಯೆ ತಲೆಹಾಕಲು ನಾನು ಬಯಸುವುದಿಲ್ಲ. ಇದು ನನಗೆ ಸರಿ ಎಂದು ತೋರಿಸುತ್ತಿಲ್ಲ ಎಂದು ಮೊದಲು ಟ್ವೀಟ್​ ಮಾಡಿದ್ದರು.

Kashmir Premier League
ಮಾಂಟಿ ಪನೇಸರ್​

By

Published : Aug 3, 2021, 3:22 PM IST

ನವದೆಹಲಿ:ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಯೋಜಿಸಲು ಹೊರಟಿರುವ ಕಾಶ್ಮೀರ್ ಪ್ರೀಮಿಯರ್​ ಲೀಗ್​ನಿಂದ ಇಂಗ್ಲೆಂಡ್ ಮಾಜಿ ಸ್ಪಿನ್ನರ್​ ಈಗಾಗಲೇ ಹೊರಬಂದಿದ್ದಾರೆ. ಆದರೆ, ಈ ನಿರ್ಧಾರ ತಮ್ಮ ಸ್ವಂತದ್ದೇ ಹೊರೆತು ನನಗೆ ಯಾರಿಂದಲೂ ಬೆದರಿಕೆ ಇಲ್ಲ ಎಂದು ಇಂಗ್ಲೆಂಡ್​ ಮಾಜಿ​​ ಸ್ಪಿನ್ನರ್​ ಮಾಂಟಿ ಪನೇಸರ್​ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಬೆಂಬಲದೊಂದಿಗೆ ಮಾಜಿ ಕ್ರಿಕೆಟಿಗರು ಮತ್ತು ಕಾಶ್ಮೀರದಲ್ಲಿನ ಯುವ ಕ್ರಿಕೆಟಿಗರಿಗಾಗಿ ವಿವಾದಿತ ಪಿಒಕೆಯಲ್ಲಿ ಕೆಪಿಎಲ್ ನಡೆಸಲು ಸ್ಥಳೀಯ ರಾಜಕಾರಣಿ ನಿರ್ಧರಿಸಿದ್ದರು. ಇದಕ್ಕೆ ವಿದೇಶಿ ಮಾಜಿ ಕ್ರಿಕೆಟಿಗರಿಗೂ ಕೂಡ ಅವಕಾಶ ನೀಡಲಾಗಿತ್ತು.

ಆದರೆ, ಬಿಸಿಸಿಐ ಎಲ್ಲಾ ಕ್ರಿಕೆಟ್​ ಬೋರ್ಡ್​ಗಳಿಗೂ ಕೆಪಿಎಲ್​ ಲೀಗ್​ನಲ್ಲಿ ಭಾಗವಹಿಸುವುದಕ್ಕೆ ಯಾವುದೇ ಆಟಗಾರನಿಗೆ ಅವಕಾಶ ನೀಡಕೂಡದು. ಒಂದು ವೇಳೆ ಅಲ್ಲಿ ಯಾವುದೇ ಆಟಗಾರ ಭಾಗವಹಿಸಿದರೆ, ಆ ಆಟಗಾರಿಗೆ ಭಾರತದಲ್ಲಿ ಕ್ರಿಕೆಟ್​ಗೆ ಸಂಬಂಧಿಸಿದ ಕಾರ್ಯಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಸೂಚನೆ ನೀಡಿತ್ತು.

ಬಿಸಿಸಿಐ ಸೂಚನೆ ನೀಡಿದ ನಂತರ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್​​​ ಗಿಬ್ಸ್​ ಬಹಿರಂಗವಾಗಿ ಈ ವಿಷಯವನ್ನು ಟ್ವೀಟ್​ ಮಾಡಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು.

ಇದೀಗ ಇಂಗ್ಲೆಂಡ್ ಸ್ಪಿನ್ನರ್ ತಾವೂ ಕಾಶ್ಮೀರ ಪ್ರೀಮಿಯರ್ ಲೀಗ್​ನಿಂದ ಹೊರಬರುತ್ತಿರುವುದಾಗಿ ಸೋಮವಾರ ಪ್ರಕಟಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ವಿಷಯಕ್ಕಾಗಿ ವಿವಾದ ವಿರುವುದರಿಂದ ನಾನು ಕೆಪಿಎಲ್​ನಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ. ಈ ವಿಷಯಗಳ ಮಧ್ಯೆ ತಲೆಹಾಕಲು ನಾನು ಬಯಸುವುದಿಲ್ಲ. ಇದು ನನಗೆ ಸರಿ ಎಂದು ತೋರಿಸುತ್ತಿಲ್ಲ ಎಂದು ಮೊದಲು ಟ್ವೀಟ್​ ಮಾಡಿದ್ದರು.

ಇದಕ್ಕೆ ಕೆಲವು ನೆಟ್ಟಿಗರು ನಿಮಗೆ ಬಿಸಿಸಿಐನಿಂದ ಬೆದರಿಕೆಯಿರಬೇಕು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮಾಂಟಿ ನನಗೆ ಯಾವುದೇ ಬೆದರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಯಾರೊಬ್ಬರು ಹೆದರಿಸಿಲ್ಲ. ಈ ಲೀಗ್​ನಿಂದಾಗುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಇಸಿಬಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಅಸೋಸಿಯೇಷನ್​ ನನಗೆ ಸಲಹೆ ನೀಡಿದೆ. ಹಾಗಾಗಿ ಲೀಗ್​ನಲ್ಲಿ ಆಡದಿರುವ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಪನೇಸರ್​ ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​​-2021ರಲ್ಲಿ ಆಡಲು ಇಂಗ್ಲೆಂಡ್​ ಆಟಗಾರರು ಲಭ್ಯ: ಬಿಸಿಸಿಐ

ABOUT THE AUTHOR

...view details