ಕರ್ನಾಟಕ

karnataka

ETV Bharat / sports

ಯಾವಾಗಲೂ ಜಡೇಜಾರನ್ನು ಆರಾಧಿಸುತ್ತೇನೆ, ಅವರೇ ನನಗೆ ಆದರ್ಶ: U19 ಪ್ರತಿಭೆ ವಿಕಿ ಒಸ್ತ್ವಾಲ್​ - DC picked Vicky Ostwal

ನಾನು ಯಾವಾಗಲೂ ರವೀಂದ್ರ ಜಡೇಜಾ ಅವರನ್ನು ಆರಾಧಿಸುತ್ತೇನೆ, ಅವರು ನನಗೆ ರೋಲ್​ ಮಾಡೆಲ್​. ಅವರು ಎಂತಹ ಅದ್ಭುತ ಆಟಗಾರ, ಬ್ಯಾಟಿಂಗ್, ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗುತ್ತಾರೆ. ವಿಶೇಷವಾಗಿ ಫೀಲ್ಡಿಂಗ್​ನಲ್ಲಿ ಅವರ ಕೊಡುಗೆ ಅದ್ಭುತವಾಗಿದೆ. ಪ್ರತಿ ತಂಡದಲ್ಲೂ ಅಂತಹ ಒಬ್ಬ ಆಟಗಾರ ಇರಬೇಕು ಎಂದು ಯುವ ಸ್ಪಿನ್ನರ್ ಐಪಿಎಲ್ ವೆಬ್​ಸೈಟ್​​ಗೆ​ ಹೇಳಿದ್ದಾರೆ.

Vicky Ostwal on  Jadeja
ವಿಕಿ ಒಸ್ತ್ವಾಲ್​ ರವೀಂದ್ರ ಜಡೇಜಾ

By

Published : Feb 17, 2022, 8:08 PM IST

ನವದೆಹಲಿ: ಅಂಡರ್ 19 ವಿಶ್ವಕಪ್​ ಗೆದ್ದ ಭಾರತ ತಂಡದಲ್ಲಿದ್ದ ಸ್ಪಿನ್ನರ್​ ವಿಕಿ ಒಸ್ತ್ವಾಲ್​, ಭಾರತ ಸೀನಿಯರ್ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾ ತಾವೂ ಆರಾಧಿಸುವ ಕ್ರಿಕೆಟಿಗ ಮತ್ತು ಅವರೇ ತಮಗೆ ಆದರ್ಶ ಎಂದು ಹೇಳಿಕೊಂಡಿದ್ದಾರೆ.

ಅಂಡರ್​ ವಿಶ್ವಕಪ್​ ನಂತರ ನಡೆದ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜಿನಲ್ಲಿ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿರುವ ಯುವ ಆಟಗಾರ, ಪ್ರಸ್ತುತ ರಣಜಿ ಟ್ರೋಪಿಯಲ್ಲಿ ಮಹಾರಾಷ್ಟ್ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ನಾನು ಯಾವಾಗಲೂ ರವೀಂದ್ರ ಜಡೇಜಾ ಅವರನ್ನು ಆರಾಧಿಸುತ್ತೇನೆ, ಅವರು ನನಗೆ ರೋಲ್​ ಮಾಡೆಲ್​. ಅವರು ಎಂತಹ ಅದ್ಭುತ ಆಟಗಾರ, ಬ್ಯಾಟಿಂಗ್, ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗುತ್ತಾರೆ. ವಿಶೇಷವಾಗಿ ಫೀಲ್ಡಿಂಗ್​ನಲ್ಲಿ ಅವರ ಕೊಡುಗೆ ಅದ್ಭುತವಾಗಿದೆ. ಪ್ರತಿ ತಂಡದಲ್ಲೂ ಅಂತಹ ಒಬ್ಬ ಆಟಗಾರ ಇರಬೇಕು ಎಂದು ಯುವ ಸ್ಪಿನ್ನರ್ ಐಪಿಎಲ್ ವೆಬ್​ಸೈಟ್​​ಗೆ​ ಹೇಳಿದ್ದಾರೆ.

ಇನ್ನು ತಮ್ಮ ಐಪಿಎಲ್ ಒಪ್ಪಂದ ಪಡೆದ ಸಂಭ್ರಮದ ಬಗ್ಗೆ ಮಾತನಾಡುತ್ತಾ, ನಾನು ಚಿಕ್ಕಂದಿನಿಂದಲೂ ಐಪಿಎಲ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ಐಪಿಎಲ್​ನಲ್ಲಿ ಆಡುವುದು ನನ್ನ ಕನಸಾಗಿತ್ತು. ನೀವು ಪಡೆಯಬಹುದಾದಂತಹ ಅತ್ಯಂತ ದೊಡ್ಡ ವೇದಿಕೆ. ಡೆಲ್ಲಿ ಕ್ಯಾಪಿಟಲ್ಸ್​ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ನಾನು ಆ ವೇದಿಕೆಯನ್ನು ಪಡೆದುಕೊಂಡಿದ್ದೇನೆ ಎಂದು ವಿಕಿ ಹೇಳಿದ್ದಾರೆ.

ನನಗೆ ಡೆಲ್ಲಿ ತಂಡದಲ್ಲಿ ಆಡಲು ಅವಕಾಶ ಸಿಗುವುದರ ಬಗ್ಗೆ ಖಾತ್ರಿಯಿಲ್ಲ. ಆದರೆ, ಕಲಿಯುವುದಕ್ಕೆ ಅಲ್ಲಿ ಅಗಾಧವಾದ ಅವಕಾಶಗಳಿವೆ. ಕೆಲವು ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವುದು ಒಂದು ದೊಡ್ಡ ಕಲಿಕೆಯಾಗಲಿದೆ. ಹರಾಜಿನಲ್ಲಿ ನನ್ನನ್ನು ಡೆಲ್ಲಿ ತಂಡ ಖರೀದಿಸುತ್ತಿದ್ದಂತೆ ಯಶ್​ ಧುಲ್​ ನನಗೆ ಕರೆ ಮಾಡಿದ್ದರು. ಡೆಲ್ಲಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಅವರ ಮುಖದಲ್ಲಿ ಸಾಕಷ್ಟು ಸಂಭ್ರಮವಿತ್ತು ಎಂದು ಒಸ್ತ್ವಾಲ್ ತಿಳಿಸಿದ್ದಾರೆ. ಯಶ್​ ಧುಲ್​ ಅವರನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ್​ 50 ಲಕ್ಷ ರೂ ನೀಡಿ ಖರೀದಿಸಿದೆ.

ಇದನ್ನೂ ಓದಿ:ರಣಜಿ ಟ್ರೋಫಿ: ಪದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್​ ಪಡೆದ ರಾಜ್​ ಬಾವಾ

ABOUT THE AUTHOR

...view details