ಕರ್ನಾಟಕ

karnataka

ETV Bharat / sports

ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಹಸನ್​ ಅಲಿ, ಜಯ ವಿಕ್ರಮ, ರಹೀಮ್​ ಹೆಸರು ಶಿಫಾರಸು - ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಮುಶ್ಫೀಕರ್​ ರಹೀಮ್​

ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಹಸನ್​ ಅಲಿ 14 ವಿಕೆಟ್​ ಪಡೆದಿದ್ದರು, ಶ್ರೀಲಂಕಾದ ಜಯವಿಕ್ರಮ ಬಾಂಗ್ಲಾದೇಶ ವಿರುದ್ಧ ಆಡಿದ ಒಂದೇ ಟೆಸ್ಟ್​ ಒಂದ್ಯದಲ್ಲಿ 11 ವಿಕೆಟ್​ ಪಡೆದಿದ್ದರು. ಅವರು ಶ್ರೀಲಂಕಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೆ, ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ದಾಖಲೆಗೆ ಪಾತ್ರರಾಗಿದ್ದರು.

ಹಸನ್ ಅಲಿ
ಹಸನ್ ಅಲಿ

By

Published : Jun 8, 2021, 7:38 PM IST

ದುಬೈ:ಪಾಕಿಸ್ತಾನದ ವೇಗಿ ಹಸನ್​ ಅಲಿ, ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಮತ್ತು ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಮುಶ್ಫೀಕರ್​ ರಹೀಮ್​ ಐಸಿಸಿಯ ಮೇ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಇದಲ್ಲದೇ ಸ್ಕಾಟ್ಲೆಂಡ್​ನ ಕ್ಯಾಥ್ರಿನ್​ ಬ್ರೈಸ್​, ಐರ್ಲೆಂಡ್​ನ ಗ್ಯಾಬಿ ಲೆವಿಸ್​ ಮತ್ತು ಲೀಹ್​ ಪಾಲ್​ ಅವರನ್ನು ಮಹಿಳೆಯರ ವಿಭಾಗದಲ್ಲಿ ಮೇ ತಿಂಗಳ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಹಸನ್​ ಅಲಿ 14 ವಿಕೆಟ್​ ಪಡೆದಿದ್ದರು. ಶ್ರೀಲಂಕಾದ ಜಯವಿಕ್ರಮ ಬಾಂಗ್ಲಾದೇಶ ವಿರುದ್ಧ ಆಡಿದ ಒಂದೇ ಟೆಸ್ಟ್​ ಒಂದ್ಯದಲ್ಲಿ 11 ವಿಕೆಟ್​ ಪಡೆದಿದ್ದರು. ಅವರು ಶ್ರೀಲಂಕಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೇ, ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ದಾಖಲೆಗೆ ಪಾತ್ರರಾಗಿದ್ದರು.

ಬಾಂಗ್ಲಾದೇಶದ ರಹೀಮ್ ಶ್ರೀಲಂಕಾ ವಿರುದ್ಧ ಒಂದು ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳನ್ನಾಡಿದ್ದರು. ಅವರು ಏಕದಿನ ಸರಣಿಯಲ್ಲಿ 237 ರನ್​ಗಳಿಸಿದ್ದರು.

ಮಹಿಳೆಯರ ವಿಭಾಗದಲ್ಲಿ ಕ್ಯಾಥ್ರಿನ್ ಬ್ರೈಸ್ ಟಿ20 ಸರಣಿಯಲ್ಲಿ 86 ರನ್​ ಮತ್ತು 5 ವಿಕೆಟ್​, ಲೆವಿಸ್​ 116 ಟಿ-20 ರನ್ಸ್​ , ಲೀಹ್​ 9 ಟಿ-20 ವಿಕೆಟ್ಸ್​ ಪಡೆದಿದ್ದಾರೆ.

ಇದನ್ನು ಓದಿ: ಭಾರತ ಗೆದ್ದ ಬಾರ್ಡರ್​-ಗವಾಸ್ಕರ್ ಟ್ರೋಫಿಗೆ 'ಸಾರ್ವಕಾಲಿಕ ಟೆಸ್ಟ್​ ಸರಣಿ' ಪಟ್ಟ

ABOUT THE AUTHOR

...view details