ಹೋಬರ್ಟ್:ಆ್ಯಷಸ್ ಕ್ರಿಕೆಟ್ ಸರಣಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡದಲ್ಲಿ ಕೆಲ ಬದಲಾವಣೆಗೆ ಮುಂದಾಗಿದೆ. ಲಯದ ಸಮಸ್ಯೆ ಎದುರಿಸುತ್ತಿರುವ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರೀಸ್ ಅವರನ್ನು ತಂಡದಿಂದ ಕೈಬಿಟ್ಟು, ಉಸ್ಮಾನ್ ಖವಾಜಾರಿಗೆ ಸ್ಥಾನ ನೀಡಲಾಗಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜೊತೆ ಉಸ್ಮಾನ್ ಖವಾಜಾ ಆರಂಭಿಕರನಾಗಿ ಕಣಕ್ಕೆ ಇಳಿಯಲಿದ್ದಾರೆ. ಇದಲ್ಲದೇ ಸಿಡ್ನಿ ಟೆಸ್ಟ್ನಲ್ಲಿ ಬೌಲಿಂಗ್ ವೇಳೆ ಉರುಳಿ ಬಿದ್ದು ಗಾಯಗೊಂಡಿದ್ದ ಸ್ಕಾಟ್ ಬೋಲ್ಯಾಂಡ್ ಅವರನ್ನು ಕೊನೆಯ ಟೆಸ್ಟ್ನಲ್ಲಿ ಆಡಿಸಬೇಕಾ ಎಂಬ ಬಗ್ಗೆ ವೈದ್ಯರು ನೀಡುವ ವರದಿ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ.