ಮಾರ್ಚ್ 4 ರಿಂದ ನ್ಯೂಜಿಲ್ಯಾಂಡ್ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಮಹಿಳಾ ವಿಶ್ವಕಪ್‌ಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಸಿದ್ಧವಾಗಿದೆ. ಭಾನುವಾರ ಪಾಕಿಸ್ತಾನದ ವಿರುದ್ಧದ ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುಂಚಿತವಾಗಿ ಆಟಗಾರರು ಪ್ರೀ- ವಲ್ಡ್ಕಪ್ ಫೋಟೋಶೂಟ್ ನಡೆಸಿದ್ದಾರೆ.
ಬಿಂದಾಸ್ ಆಗಿ ಭಾಂಗ್ರಾ ಡ್ಯಾನ್ಸ್ ಮಾಡಿದ ಹರ್ಮನ್‌ಪ್ರೀತ್ ಕೌರ್ - ಭಾರತೀಯ ಮಹಿಳಾ ಕ್ರಿಕೆಟ್ ತಂಡ
ಐಸಿಸಿ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಭಾರತೀಯ ಮಹಿಳಾ ಆಟಗಾರರ ಕುರಿತಾದ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ಹರ್ಮನ್‌ಪ್ರೀತ್ ಕೌರ್ ಬಿಂದಾಸ್ ಆಗಿ ಭಾಂಗ್ರಾ ಡ್ಯಾನ್ಸ್ ಮಾಡಿದ್ದಾರೆ.
ಐಸಿಸಿ, ಭಾರತೀಯ ಮಹಿಳಾ ಆಟಗಾರರ ಕುರಿತಾದ ವಿಡಿಯೋವೊಂದನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದೆ. ಇದರಲ್ಲಿ ಆಟಗಾರರು ಸಾಕಷ್ಟು ಸಂತಸದಿಂದ ಇದ್ದು, ತಂಡದಲ್ಲಿ ಹೆಚ್ಚಿನ ಉತ್ಸಾಹ ಕಾಣುತ್ತಿದೆ. ಅಷ್ಟೇ ಅಲ್ಲದೆ, ಈ ವಿಡಿಯೋದಲ್ಲಿ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಸಾಂಪ್ರದಾಯಿಕ ಪಂಜಾಬಿ ಜಾನಪದ "ಭಾಂಗ್ರಾ" ನೃತ್ಯದ ಹೆಜ್ಜೆಹಾಕಿದ್ದು, ನಾನು ಎಲ್ಲಿಗೆ ಹೋದರೂ ಇದನ್ನೇ ಮಾಡುತ್ತೇನೆ ಎಂದಿದ್ದಾರೆ.
ಕಳೆದ 2017ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 9 ರನ್‌ಗಳಿಂದ ಸೋತಿತ್ತು. ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲೂ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.