ಕ್ಯಾಂಟರ್ಬರಿ(ಇಂಗ್ಲೆಂಡ್):ಆಂಗ್ಲರ ನೆಲದಲ್ಲಿ ಪಾರಮ್ಯ ಮೆರೆದಿರುವ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅದ್ಭುತ ಫಾರ್ಮ್ನಲ್ಲಿರುವ ಕ್ಯಾಪ್ಟನ್ ಹರ್ಮನ್ಪ್ರೀತ್ ಕೌರ್ ದಾಖಲೆಯ 143ರನ್ಗಳ ಆಟವಾಡಿದರು. ಇದರಲ್ಲಿ ಕೊನೆಯ 43 ರನ್ಗಳು ಕೇವಲ 11 ಎಸೆತಗಳಲ್ಲಿ ಹರಿದು ಬಂದಿವೆ ಎಂಬುದು ಗಮನಾರ್ಹ.
ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ನಾಯಕಿ ಹರ್ಮನ್ಪ್ರೀತ್ ಕೌರ್ ರನ್ ಮಳೆ ಹರಿಸಿದರು. ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಅವರು, 64 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕ ತಮ್ಮ ಬ್ಯಾಟಿಂಗ್ಗೆ ವೇಗ ನೀಡಿ 100 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ 23 ವರ್ಷಗಳ ಬಳಿಕ ODI ಸರಣಿ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ಟೀಂ
11 ಎಸೆತಗಳಲ್ಲಿ 43 ರನ್!:ಪಂದ್ಯದಲ್ಲಿ ಟೀಂ ಇಂಡಿಯಾ 47 ಓವರ್ಗಳಲ್ಲಿ 271ರನ್ಗಳಿಕೆ ಮಾಡಿತ್ತು. ಇನ್ನುಳಿದ ಮೂರು ಓವರ್ಗಳಲ್ಲಿ ತಂಡ ದಾಖಲೆಯ 62 ರನ್ ಸೊರೆಗೈದಿದೆ. ಇದರಲ್ಲಿ ಹರ್ಮನ್ಪ್ರೀತ್ ಕೌರ್ 11 ಎಸೆತಗಳಲ್ಲಿ 43 ರನ್ಗಳಿಕೆ ಮಾಡಿದ್ದರು. ಈ ಮೂಲಕ ಅಜೇಯ 143 ರನ್ ಸಂಪಾದಿಸಿದರು. ಇವರ ಇನ್ನಿಂಗ್ಸ್ನಲ್ಲಿ 4 ಸಿಕ್ಸರ್, 18 ಬೌಂಡರಿಗಳು ಸೇರಿದ್ದವು. ಮಹಿಳಾ ಕ್ರಿಕೆಟ್ನಲ್ಲಿ ಹರ್ಮನ್ ಪ್ರೀತ್ ಬ್ಯಾಟ್ನಿಂದ ಸಿಡಿದಿರುವ 5ನೇ ಹಾಗೂ ಎರಡನೇ ವೇಗದ ಶತಕ ಇದಾಗಿದೆ.
ಹರ್ಮನ್ ಆಟಕ್ಕೆ ಮೆಚ್ಚುಗೆ: ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ವೈಖರಿಗೆ ಮಾಜಿ ಆಟಗಾರರಾದ ದೀಪ್ ದಾಸ್ಗುಪ್ತಾ, ಅಮಿತ್ ಮಿಶ್ರಾ ಹಾಗೂ ಇಯಾನ್ ಬಿಷಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಸೀಂ ಜಾಫರ್,ಅಭಿನವ್ ಮುಕ್ಕುಂದ್ ಸಹ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.