ಕರ್ನಾಟಕ

karnataka

ETV Bharat / sports

ಕೌರ್ ಶತಕ; ಅಭ್ಯಾಸ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಭಾರತ ವನಿತೆಯರಿಗೆ 2 ರನ್​ಗಳ ರೋಚಕ ಜಯ - ಮಹಿಳಾ ಏಕದಿನ ವಿಶ್ವಕಪ್

10ನೇ ಓವರ್​ನಲ್ಲಿ ಕಣಕ್ಕಿಳಿದಿದ್ದ ಕೌರ್​ 44ನೇ ಓವರ್​ವರೆಗೂ ಬ್ಯಾಟಿಂಗ್​ ಮಾಡಿ ಶತಕ ಪೂರೈಸಿದರು, ಅವರು 114 ಎಸೆತಗಳಲ್ಲಿ 8 ಬೌಂಡರಿ ಸಹಿತ 103 ರನ್​ಗಳಿಸಿದರು.

Harmanpreet Kaur scores ton
ಹರ್ಮನ್​ಪ್ರೀತ್ ಕೌರ್ ಶತಕ

By

Published : Feb 27, 2022, 10:10 PM IST

ರ್‍ಯಾಂಗಿಯೋರ(ನ್ಯೂಜಿಲ್ಯಾಂಡ್): ಉಪನಾಯಕಿ ಹರ್ಮನ್ ಪ್ರೀತ್ ಕೌರ್​ ಅವರ ಜವಾಬ್ದಾರಿಯುತ ಶತಕ ಮತ್ತು ಬೌಲರ್​ಗಳ ಸಂಘಟಿತ ಪ್ರದರ್ಶನದಿಂದ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್​ನ ಮೊದಲ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ 2 ರನ್​ಗಳ ರೋಚಕ ಜಯ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ನಿರೀಕ್ಷಿತ ಆರಂಭ ಪಡೆಯುವ ಮೊದಲೇ ಓಪನರ್​ ಸ್ಮೃತಿ ಮಂಧಾನ ಅವರಿಗೆ ಚೆಂಡು ತಲೆಗೆ ಬಡಿದ ಪರಿಣಾಮ ಮೈದಾನ ತೊರೆದರು. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೀಪ್ತಿ ಶರ್ಮಾ 5 ರನ್​ ಮತ್ತು ನಾಯಕ ಮಿಥಾಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಆದರೆ 3ನೇ ವಿಕೆಟ್​ಗೆ ಒಂದಾದ ಯಸ್ತಿಕಾ ಭಾಟಿಯಾ ಮತ್ತು ಕೌರ್​ 84 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಬಾಟಿಯಾ 78 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 58 ರನ್​ಗಳಿಸಿದರು. ಭಾಟಿಯಾ ವಿಕೆಟ್ ನಂತರ ಭಾರತೀಯ ಪಡೆ ಪೆವಿಲಿಯನ್ ಪರೇಡ್ ನಡೆಸಿತು.ರಿಚಾ ಘೋಷ್​ 11, ಸ್ನೇಹ್​ ರಾಣಾ 14, ಪೂಜಾ ವಸ್ತ್ರಾಕರ್​ 16 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

10ನೇ ಓವರ್​ನಲ್ಲಿ ಕಣಕ್ಕಿಳಿದಿದ್ದ ಕೌರ್​ 44ನೇ ಓವರ್​ವರೆಗೂ ಬ್ಯಾಟಿಂಗ್​ ಮಾಡಿ ಶತಕ ಪೂರೈಸಿದರು, ಅವರು 114 ಎಸೆತಗಳಲ್ಲಿ 8 ಬೌಂಡರಿ ಸಹಿತ 103 ರನ್​ಗಳಿಸಿದರು.

ಇನ್ನು 245 ರನ್​ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 242 ರನ್​ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳ ರೋಚಕ ಸೋಲು ಕಂಡಿತು.

ಹರಿಣಗಳ ಪರ ಲೌರಾ ವೋಲ್ವಾರ್ಟ್ 95 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 83, ನಾಯಕಿ ಸುನೆ ಲುಸ್ 98 ಎಸೆತಗಳಲ್ಲಿ 6 ಬೌಂಡರಿ ಸಹಿತ 86 ಹಾಗೂ ಮರಿಝಾನ್ನೆ ಕಾಪ್​ 31 ರನ್​ಗಳಿಸಿದರು.

ಭಾರತದ ಪರ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್​ 46ಕ್ಕೆ 4, ಮೇಗನಾ ಸಿಂಗ್ 38ಕ್ಕೆ1, ಸ್ನೇಹ್ ರಾಣಾ 38ಕ್ಕೆ1, ಪೂನಮ್ ಯಾದವ್​ 54ಕ್ಕೆ1 ವಿಕೆಟ್ ಪಡೆದರು.

ಇದನ್ನೂ ಓದಿ:ಸ್ಟ್ರಾಂಡ್​ಜಾ ಮೆಮೊರಿಯಲ್​ ಬಾಕ್ಸಿಂಗ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ನಿಖಾತ್​, ನೀತು

ABOUT THE AUTHOR

...view details