ಹೈದರಾಬಾದ್: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅನೇಕ ಕ್ರಿಕೆಟ್ ಪ್ಲೇಯರ್ಸ್, ಸಿನಿಮಾ ತಾರೆಯರು, ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಹಾರೈಕೆ ಮಾಡಿದ್ದಾರೆ. ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಸಹ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಎಲ್ಲರಿಗಿಂತಲೂ ವಿಭಿನ್ನವಾಗಿ ಶುಭ ಹಾರೈಕೆ ಮಾಡಿರುವ ಹಾರ್ದಿಕ್ ಪಾಂಡ್ಯಾ ಮೈ ಡಾರ್ಲಿಂಗ್.. ಹುಟ್ಟುಹಬ್ಬದ ಶುಭಾಶಯ ಮಹಿ ಭಾಯ್(My darling ❤️ Wishing you the best birthday Mahi bhai) ಎಂದು ಬರೆದುಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕನಾಗಿದ್ದಾಗ ಅಂದರೆ 2016ರಲ್ಲಿ ಹಾರ್ದಿಕ್ ಪಾಂಡ್ಯಾ ಭಾರತ ತಂಡಕ್ಕೆ ಡೆಬ್ಯು ಮಾಡಿದ್ದರು. ಇನ್ನೂ ಕಳೆದ ಕೆಲ ತಿಂಗಳ ಹಿಂದೆ ವೈಫಲ್ಯಕ್ಕೊಳಗಾಗಿ ತಂಡದಿಂದ ಹಾರ್ದಿಕ್ ಕಡೆಗಣಿಸಲ್ಪಟ್ಟಾಗ ಧೋನಿ ಸಲಹೆ ನೀಡಿದ್ದರು. ಅದರ ಫಲವಾಗಿ ಇದೀಗ ಕಮ್ಬ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಖುದ್ದಾಗಿ ಹೇಳಿಕೊಂಡಿದ್ದರು.