ಹೈದರಾಬಾದ್ (ತೆಲಂಗಾಣ): ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಹೈದರಾಬಾದ್ಗೆ ಬಂದಿದ್ದ ಭಾರತೀಯ ಕ್ರಿಕೆಟಿಗರಿಗೆ ಟಾಲಿವುಡ್ ನಟ ರಾಮ್ ಚರಣ್ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ಪಂದ್ಯದಲ್ಲಿ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಚರಣ್ ಮನೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಆಟಗಾರರನ್ನು ಸನ್ಮಾನಿಸಿದ ಬಳಿಕ ಚರಣ್ ಅವರೊಂದಿಗೆ ಕೆಲಕಾಲ ತಮಾಷೆ ಮಾಡಿದರು. ಈ ಪಾರ್ಟಿಯಲ್ಲಿ ರಾಮ್ ಚರಣ್ - ಉಪಾಸನಾ ದಂಪತಿ ಜೊತೆಗೆ, ಮೆಗಾ ಕುಟುಂಬ ಸದಸ್ಯರು ಮತ್ತು ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಶೀಘ್ರದಲ್ಲೇ ಚರಣ್ ಈ ಪಾರ್ಟಿಯ ಫೋಟೋಗಳನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮತ್ತೊಂದೆಡೆ, ರಾಮ್‌ಚರಣ್ ನಿವಾಸದಲ್ಲಿ ಹಾರ್ದಿಕ್ ಪಾಂಡ್ಯ ವ್ಯಕ್ತಿಯೊಬ್ಬರ ಜೊತೆಗಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.