ಹೈದರಾಬಾದ್: ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸದಲ್ಲಿದ್ದು, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಗೆ ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಆಟಗಾರರು ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದು, ಪಾಂಡ್ಯ ಸಹೋದರರು ಕಸರತ್ತು ಕೊಂಚ ವಿಶೇಷವಾಗಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಜಿಮ್‍ನಲ್ಲಿ ಜಿದ್ದಿಗೆ ಬಿದ್ದು ಯಾರು ಬೆಸ್ಟ್ ಎನ್ನುವುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಮೊದಲು ಇಬ್ಬರೂ ‘ವಾಲ್ ಸ್ಕ್ವಾಟ್ ಹೋಲ್ಡ್’ ಎಂಬ ಚಾಲೆಂಚ್ ಸ್ವೀಕರಿಸಿದ್ದಾರೆ. ಈ ಸವಾಲಿನಲ್ಲಿ ಕೃನಾಲ್ ಪಾಂಡ್ಯ ಗೆದ್ದರು. ಬಳಿಕ ಎರಡನೇ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ಇದಾದ ನಂತರ ಅಂತಿಮ ಸುತ್ತಿನ ‘ಸ್ಪ್ಲಿಟ್ ಸ್ಕ್ವಾಟ್ ಹೋಲ್ಡ್’ ಸ್ಪರ್ಧೆಯಲ್ಲಿ ಇಬ್ಬರೂ ಕೂಡ ಸಮಾನವಾಗಿ ಸ್ಪರ್ಧಿಸುವ ಮೂಲಕ ಇಬ್ಬರೂ ಸ್ಟ್ರಾಂಗ್ ಎಂದು ನಿರೂಪಿಸಿದರು.
ಇದನ್ನೂ ಓದಿ: Ind vs Sl : ಲಂಕಾ ಆಟಗಾರರಿಗೆ ಕೋವಿಡ್ ಟೆಸ್ಟ್; ಆಟಗಾರರ ವರದಿ ಹೀಗಿದೆ..