ದುಬೈ: ಕಳೆದ ಒಂದು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿವೆ. ಕಳೆದ ಎರಡೂ ಐಪಿಎಲ್ನಲ್ಲಿ ಪಾಂಡ್ಯ ಬೌಲಿಂಗ್ ಮಾಡದಿರುವುದರಿಂದ ಅವರ ಆಲ್ರೌಂಡರ್ ಟ್ಯಾಗ್ಗೆ ಕಂಟಕ ಎದುರಾಗಿದೆ. ಒಂದು ವೇಳೆ ಅವರು ಬೌಲಿಂಗ್ ಮಾಡಲು ಅಸಮರ್ಥರಾದರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಅವರಿಗೆ ಅವಕಾಶ ಸಿಗದಿರುವ ಸಾಧ್ಯತೆಗಳಿವೆ ಎಂಬ ಚರ್ಚೆಯಾಗುತ್ತಿದೆ.
ಆದರೆ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಅಭ್ಯಾಸ ಪಂದ್ಯದ ವೇಳೆ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ವಿಶ್ವಕಪ್ ಆರಂಭವಾಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.