ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲು ಒಂದು ದಿನ ಬಾಕಿ ಇರುವಾಗ ಟೀಂ ಇಂಡಿಯಾ ನಿಯೋಜಿತ ಕ್ಯಾಪ್ಟನ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ನಾಯಕತ್ವದ ಜವಾಬ್ದಾರಿ ಇದೀಗ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೆಗಲ ಮೇಲೆ ಬಿದ್ದಿದೆ. ತಾವು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದಕ್ಕೆ ಸಂಬಂಧಿಸಿದಂತೆ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಒಪ್ಪಿಕೊಳ್ಳುವುದು ಕಷ್ಟ. ತವರಿನಲ್ಲಿ ಮೊದಲ ಸಲ ಭಾರತ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಲು ಎದುರು ನೋಡುತ್ತಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ತಂಡಕ್ಕೆ ಶುಭ ಹಾರೈಸಿರುವ ರಾಹುಲ್, "ಒಪ್ಪಿಕೊಳ್ಳುವುದು ಕಷ್ಟ. ಆದರೆ, ಇಂದಿನಿಂದ ಮತ್ತೊಂದು ಸವಾಲು ಆರಂಭಿಸಲಿದ್ದೇನೆ. ತವರು ನೆಲದಲ್ಲಿ ಮೊದಲ ಸಲ ತಂಡ ಮುನ್ನಡೆಸಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಆದರೆ, ಎಲ್ಲ ಪ್ಲೇಯರ್ಸ್ಗೆ ನನ್ನ ಬೆಂಬಲವಿದೆ. ರಿಷಭ್ ಪಂತ್ಗೆ ಶುಭ ಹಾರೈಸುತ್ತೇನೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.