ಮುಂಬೈ :ಭಾರತ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತದ ಪರ 15ಕ್ಕೂ ಹೆಚ್ಚು ವರ್ಷಗಳ ಕಾಲ ಕ್ರಿಕೆಟ್ ಆಡಿರುವ ದಿಗ್ಗಜನಿಗೆ ಯುವರಾಜ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಹಾಲಿ ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.
ಭಜ್ಜಿ ಭಾರತದ ಪರ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್, 236 ಪಂದ್ಯಗಳಿಂದ 269 ವಿಕೆಟ್ ಮತ್ತು 28 ಟಿ20 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದಾರೆ.
ಎಲ್ಲಾ ವಿಭಾಗದ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೆಚ್ಚು ವಿಕೆಟ್ ಪಡೆದಿರುವ ಭಾರತದ ಎರಡನೇ ಬೌಲರ್, ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಹ್ಯಾಟ್ರಿಕ್ ಪಡೆದ ಭಾರತೀಯ, 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿನ್ನರ್ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಐಸಿಸಿ ಟ್ವೀಟ್ ಮಾಡುವ ಮೂಲಕ ಶುಭಕೋರಿದೆ.
ಬಿಸಿಸಿಐ ಕೂಡ 2007ರ ವಿಶ್ವ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿನ್ನರ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ. 367 ಅಂತಾರಾಷ್ಟ್ರೀಯ ಪಂದ್ಯಗಳಿಂದ 711 ವಿಕೆಟ್ ಹಾಗೂ 3569 ರನ್ಗಳಿಸಿರುವ ಭಾರತದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದೆ.