ಮುಂಬೈ:ಕಗಿಸೋ ರಬಾಡ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ಗಳಿಸಲಷ್ಟೇ ಶಕ್ತವಾಗಿದೆ.
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಪ್ರಯೋಗ ಮಾಡುವ ಸಲುವಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಹಾರ್ದಿಕ್ ನಿರ್ಣಯ ಫಲಿಸಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್ ರನೌಟ್ ಆದರೆ, ನಂತರ ಸಹಾ ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಬ್ಯಾಟರ್ಗಳಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಯಕ ಪಾಂಡ್ಯ ಕೇವಲ 1ರನ್ಗಳಿಸಿ ರಿಷಿ ಧವನ್ ಬೌಲಿಂಗ್ನಲ್ಲಿ ಔಟಾದರೆ, ಡೇವಿಡ್ ಮಿಲ್ಲರ್(11) ರನ್ಗಳಿಸಿದ ಲಿವಿಂಗ್‌ಸ್ಟೋನ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಅದ್ಭುತ ಫಾರ್ಮ್ನಲ್ಲಿ ರಾಹುಲ್ ತೆವಾಟಿಯಾ(11) ಮತ್ತು ರಶೀದ್ ಖಾನ್(0) ರನ್ನು ರಬಾಡ 17ನೇ ಓವರ್ನಲ್ಲಿ ಪೆವಿಲಿಯನ್ಗಟ್ಟಿದರು. ನಂತರ ಬಂದ ಪ್ರದೀಪ್ ಸಂಗ್ವಾನ್(2), ಫರ್ಗುಸನ್(5) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ನಿರಂತರ ವಿಕೆಟ್ ಕಳೆದುಕೊಳ್ಳುತ್ತಿದ್ದ ಟೈಟನ್ಸ್ ಒಂದು ಹಂತದಲ್ಲಿ 120-130 ರನ್ ಗಳಿಸುವುದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಸಾಯಿ ಸುದರ್ಶನ್ ಕೊನೆಯವರೆಗೂ ಕ್ರೀಸ್ನಲ್ಲಿ ನೆಲೆಯೂರಿ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 64 ರನ್ಗಳಿಸಿ ತಂಡದ ಮೊತ್ತವನ್ನು 143ಕ್ಕೆ ಕೊಂಡೊಯ್ದರು.