ಕರ್ನಾಟಕ

karnataka

ETV Bharat / sports

IPL 2023: 16ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ಆರಂಭ... ನಾಟು ನಾಟು ಹಾಡಿಗೆ ರಶ್ಮಿಕಾ ಡ್ಯಾನ್ಸ್

ಐಪಿಎಲ್​ನಲ್ಲಿ ಉದ್ಘಾಟನೆಯಲ್ಲಿ ಅರ್ಜಿತ್​ ಸಿಂಗ್​, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಮನರಂಜನಾ ಕಾರ್ಯಕ್ರಮದ ಸದೌತಣ

IPL 2023: 16ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ಆರಂಭ
IPL 2023: 16ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ಆರಂಭ

By

Published : Mar 31, 2023, 7:17 PM IST

Updated : Mar 31, 2023, 8:04 PM IST

ಅಹಮದಾಬಾದ್​:ಇಲ್ಲಿನನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 16ನೇ ಆವೃತ್ತಿಗೆ ಅದ್ಧೂರಿ ಆರಂಭ ಸಿಕ್ಕಿದೆ. ಇಂದಿನ ಮೊದಲ ಪಂದ್ಯಕ್ಕೂ ಮುನ್ನ ಭರ್ಜರಿ ಮನರಂಜನಾ ಕಾರ್ಯಕ್ರಮಗಳು ನಡೆದವು. ಅರ್ಜಿತ್​ ಸಿಂಗ್​, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಕಾರ್ಯಕ್ರಮದಲ್ಲಿ ರಂಜಿಸಿದರು. ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ಇನ್ನು ಎರಡು ತಿಂಗಳು ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆಯ ಮಹಾಪೂರವೇ ಹರಿಯಲಿದೆ.

ಬಾಲಿವುಡ್​ ತಾರೆಗಳ ಮೆರುಗು: ಪಂದ್ಯಾವಳಿಗೂ ಮುನ್ನ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಅರ್ಜಿತ್​ ಸಿಂಗ್​ ಬಾಲಿವುಡ್ ಇತ್ತೀಚಿನ ಸಿನಿಮಾಗಳಾದ ಪಠಾಣ್​, ಬ್ರಹ್ಮಾಸ್ತ್ರ ಮತ್ತ ತು ಜುಟಿ ಮೇ ಮಕ್ಕರ್ ಚಿತ್ರ ಹಾಡುಗಳನ್ನು ಹಾಡಿದರು. ನಂತರ ತಮನ್ನಾ ಭಾಟಿಯಾ ಮತ್ತು ನ್ಯಾಷನಲ್ ಕ್ರಷ್​​ ರಶ್ಮಿಕಾ ಮಂದಣ್ಣ ಹಿಟ್​ ಹಾಡಿಗಳಿಗೆ ಹೆಜ್ಜೆ ಹಾಕಿದರು. ಮಂದಣ್ಣ ನಾಟು ನಾಟು ಹಾಡಿಗೆ ಸೊಂಟ ಬಳುಕಿಸಿದರು. ಮಂದಿರಾ ಬೇಡಿ ಕಾರ್ಯಕ್ರಮವನ್ನು ನಿರೂಪಿಸಿದರು.

40 ನಿಮಿಷದ ಮನರಂಜನಾ ಕಾರ್ಯಕ್ರಮದ ನಂತರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ವೇದಿಕೆಗೆ ಬಂದು ಅರ್ಜಿತ್​ ಸಿಂಗ್​, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಧನ್ಯವಾದ ಸಮರ್ಪಿಸಿದರು. ಇದೇ ವೇಳೆ ಉಭಯ ತಂಡದ ನಾಯಕರನ್ನು ತೆರೆದ ವಾಹನದಲ್ಲಿ ವೇದಿಕೆಗೆ ಕರೆಸಿ ಮೊದಲ ಪಂದ್ಯಕ್ಕೆ ನಾಯಕರಿಗೆ ಶುಭ ಹಾರೈಸಲಾಯಿತು.

ಟಾಸ್​ ಗೆದ್ದ ಟೈಟನ್ಸ್​​:ಚೆನ್ನೈ ಸೂಪರ್ ಕಿಂಗ್ಸ್ ನಾಯಕಮಹೇಂದ್ರ ಸಿಂಗ್ ಧೋನಿ ಹಾಗೂ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್​ ಪಾಂಡ್ಯ ತಂಡಗಳ ನಡುವೆ ಈ ಆವೃತ್ತಿಯ ಮೊದಲ ಪಂದ್ಯ ಏರ್ಪಟ್ಟಿದೆ. ಟಾಸ್​ ಗೆದ್ದ ಗುಜರಾತ್​ ಟೈಟನ್ಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ

ತಂಡಗಳು ಇಂತಿವೆ.. ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ (ನಾಯಕ/ ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್

ಚೆನ್ನೈ ಸೂಪರ್ ಕಿಂಗ್ಸ್​ ಇಂಪ್ಯಾಕ್ಟ್​ ಆಟಗಾರರು: ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್​ ಕೀಪರ್​), ಶುಬ್ಮನ್ ಗಿಲ್, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಲ್, ಅಲ್ಜಾರಿ ಜೋಸೆಫ್

ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್​ ಆಟಗಾರರು:ಬಿ ಸಾಯಿ ಸುದರ್ಶನ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆಎಸ್ ಭರತ್

ಸ್ವೀಟ್​ ಸಿಕ್ಸ್ಟೀನ್​ ಐಪಿಎಲ್​: 2008ರಲ್ಲಿ ಆರಂಭವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ ತನ್ನ 15 ಆವೃತ್ತಿಗಳನ್ನು ಮುಗಿಸಿ 16ಕ್ಕೆ ಪ್ರವೇಶ ಪಡೆದುಕೊಂಡಿದೆ. 15 ಆವೃತ್ತಿಗಳಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್ (2013, 2015, 2017, 2019, 2020)​​ ಮತ್ತು 4 ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ (2010, 2011, 2018, 2021) ಕಪ್ ಗೆದ್ದುಕೊಂಡಿದೆ. ಕೊಲ್ಕತ್ತಾ ನೈಟ್​ ರೈಡರ್ಸ್​ 2 ಬಾರಿ (2012, 2014), 2016 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​, 2008 ರಾಜಸ್ಥಾನ ರಾಯಲ್ಸ್​, 2009 ಡೆಕ್ಕನ್​ ಚಾರ್ಜಸ್ ಮತ್ತು ಕಳೆದ ಬಾರಿ 2022 ರಲ್ಲಿ ನೂತನ ತಂಡ ಗುಜರಾತ್​ ಟೈಟನ್ಸ್ ಚಾಂಪಿಯನ್ಸ್ ಆಗಿದ್ದರು. 15 ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್​ ಕಿಂಗ್ಸ್​ ಪ್ರಶಸ್ತಿ ಗಳಿಸಿಲ್ಲ. ಕಳೆದ ವರ್ಷ ಸೇರಿದ ಲಕ್ನೋ ಸೂಪರ್​ ಚೈಂಟ್ಸ್​ ಸಹ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ.

ಇದನ್ನೂ ಓದಿ:ಐಪಿಎಲ್​ನಲ್ಲಿ 'ಫ್ಯಾನ್​ ಪಾರ್ಕ್'​ ಮೆರುಗು: ಕರ್ನಾಟಕದಲ್ಲಿ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

Last Updated : Mar 31, 2023, 8:04 PM IST

ABOUT THE AUTHOR

...view details