ಪುಣೆ: ಋತುರಾಜ್ ಗಾಯಕ್ವಾಡ್ ಅವರ ಅರ್ಧಶತಕ ಮತ್ತು ರಾಯುಡು ಅವರ 46 ರನ್ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 169 ರನ್ಗಳಿಸಿದೆ.
ಕಳೆದ 5 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ ಜವಾಬ್ದಾರಿಯುವ ಇನ್ನಿಂಗ್ಸ್ ಕಟ್ಟಿದರು. ಸಿಎಸ್ಕೆ ಪವರ್ ಪ್ಲೇ ಒಳಗೆ 32 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಕಳೆದ ಪಂದ್ಯದ ಹೀರೋ ಉತ್ತಪ್ಪ 3 ಮತ್ತು ಮೊಯೀನ್ ಅಲಿ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಗಾಯಕ್ವಾಡ್ ಮತ್ತು ಅನುಭವಿ ರಾಯುಡು 3ನೇ ವಿಕೆಟ್ಗೆ 92 ರನ್ ಸೇರಿಸಿ ಚೇತರಿಕೆ ನೀಡಿದರು.
31 ಎಸೆತಗಳನ್ನೆದುರಿಸಿದ ರಾಯುಡು 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 46 ರನ್ಗಳಿಸಿದರೆ, ಗಾಯಕ್ವಾಡ್ 48 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 73 ರನ್ಗಳಸಿ ತಂಡವನ್ನು ಸುಸ್ಥಿತಿಗೆ ತಂದು ನಿರ್ಗಮಿಸಿದರು. ಕೊನೆಯಲ್ಲಿ ಜಡೇಜಾ 12 ಎಸೆತಗಳಲ್ಲಿ 22, ದುಬೆ 17 ಎಸೆತಗಳಲ್ಲಿ 19 ರನ್ಗಳಿಸಿದರು.