ಕರ್ನಾಟಕ

karnataka

ETV Bharat / sports

IPL 2023: ಇಂದಿನಿಂದ ಚುಟುಕು ಕ್ರಿಕೆಟ್ ಅಬ್ಬರ... ಚೊಚ್ಚಲ ಪಂದ್ಯದಲ್ಲಿ ಗುರು-ಶಿಷ್ಯರ ಸಮರ.. ಹೀಗಿದೆ ತಂಡಗಳ ಬಲಾಬಲ

ಐಪಿಎಲ್​​ 16ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಹಣಾಹಣಿ.

Gujarat Titans vs Chennai Super Kings, 1st Match
IPL 2023: ಚೊಚ್ಚಲ ಪಂದ್ಯದಲ್ಲಿ ಗುರು-ಶಿಷ್ಯ ಕಾಳಗ, ಗೆಲುವು ಯಾರಿಗೆ?

By

Published : Mar 31, 2023, 4:13 PM IST

ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2023ರ ಆವೃತ್ತಿ ಇಂದಿನಿಂದ ಶುರುವಾಗಲಿದೆ. ಚುಟುಕ ಕ್ರಿಕೆಟ್ ಹಬ್ಬದ ಅದ್ಧೂರಿ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಆರಂಭಿಕ ಪಂದ್ಯಗಳಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ.

ಮೊದಲ ಪಂದ್ಯ ಇಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್​ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ಚಾಂಪಿಯನ್​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ನಡೆಯಲಿದ್ದು, ಅಭಿಮಾನಿಗಳಲ್ಲಿ ಕತೂಹಲ ಹೆಚ್ಚಿಸಿದೆ .

ತಾಳ್ಮೆಯ ನಾಯಕತ್ವದಿಂದ ಕೂಲ್​ ಕ್ಯಾಪ್ಟನ್​ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಎದುರು ಆಕ್ರಮಣಕಾರಿ ನಡೆ ಮತ್ತು ನಿರ್ಧಾರಗಳ ಹಾರ್ದಿಕ್​ ಪಾಂಡ್ಯ ನಡುವೆ ಭರ್ಜರಿ ಪೈಪೋಟಿಯಂತೂ ಏರ್ಪಡಲಿದೆ. ಗುರುವಿನ ಎದುರು ಶಿಷ್ಯ ಹೊಸ ನಿಯಮಗಳನ್ನು ಹೇಗೆ ಬಳಸಿಕೊಂಡು ಇಂದು ಯಶಸ್ವಿಯಾಗುತ್ತಾರಾ ಎಂದು ಕಾದು ನೋಡಬೇಕಿದೆ.

ಈ ಪಂದ್ಯ ಭಾರತೀಯ ಕ್ರಿಕೆಟ್‌ನ ಎರಡು ತಲೆಮಾರುಗಳ ನಡುವಿನ ಮುಖಾಮುಖಿಯಾಗಿದೆ. ಒಂದು ಬದಿಯಲ್ಲಿ ಸಿಎಸ್​ಕೆ ನಾಯಕ ಎಂಎಸ್​ ಧೋನಿ ಐಸಿಸಿ ನಡೆಸುವ ಮೂರು ಪ್ರತಿಷ್ಠಿತ ಕಪ್​ಗಳನ್ನು ಗೆದ್ದ ನಾಯಕರಾಗಿದ್ದಾರೆ. ಅಲ್ಲದೇ ಧೋನಿ ತಮ್ಮ ಯಶಸ್ಸಿನ ಸರಣಿಯನ್ನು ಐಪಿಎಲ್​ನಲ್ಲೂ ಮುಂದುವರೆಸಿ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಇನ್ನೊಂದು ಬದಿಯಲ್ಲಿ ಗುಜರಾತ್​ ಟೈಟಾನ್ಸ್​ ನಾಯಕ ಹಾರ್ದಿಕ್ ಪಾಂಡ್ಯ ಅವರು ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಯಶಸ್ಸು ಅವರಿಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶವನ್ನು ತಂದುಕೊಟ್ಟಿತು. ಹಾರ್ದಿಕ್ ಪಾಂಡ್ಯ ತಮ್ಮನ್ನು ಕ್ರಿಕೆಟ್​ ಲೋಕಕ್ಕೆ ಅದ್ಭುತವಾಗಿ ಪರಿಚಯಿಸಿಕೊಂಡಿದ್ದು ಈ ಐಪಿಎಲ್​ ವೇದಿಕೆಯಿಂದಲೇ. ಐಪಿಎಲ್​ ಲೀಗ್​ನಲ್ಲಿ ಪಾಂಡ್ಯ ಅವರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಆಯ್ಕೆಗಾರರ ಗಮನ ಸೆಳೆದಿತ್ತು.

ಗುಜರಾತ್ ತಂಡದ ಓಪನರ್ ಆಗಿರುವ ಶುಭಮನ್ ಗಿಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ನಾಯಕ ಪಾಂಡ್ಯ ಅವರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಗಮನ ಸೆಳೆಯಲಿದ್ದಾರೆ. ಮ್ಯಾಥ್ಯೂ ವೇಡ್, ರಾಹುಲ್ ತೆವಾಟಿಯಾ ಮತ್ತು ಶ್ರೀಕರ್ ಭರತ್ ಮಧ್ಯಮ ಕ್ರಮಾಂಕ ನಿಭಾಯಿಸಲಿದ್ದಾರೆ. ಕೇನ್ ವಿಲಿಯಮ್ಸನ್ ಸಹ ಫಾರ್ಮ್​ನಲ್ಲಿದ್ದು, ರಶೀದ್ ಖಾನ್, ಒಡಿಯನ್ ಸ್ಮಿತ್, ತೆವಾಟಿಯಾ, ಅಭಿನವ್ ಮನೋಹರ್, ಪಾಂಡ್ಯ ಮತ್ತು ವಿಜಯ್ ಶಂಕರ್ ಅವರಂತಹ ಆಲ್ ರೌಂಡರ್‌ಗಳು ಗುಜರಾತ್​ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಶಕ್ತಿಯಾಗಿದ್ದಾರೆ. ಈ ಆಲ್​ರೌಡರ್​ಗಳಲ್ಲೇ ಒಬ್ಬರು ಇಂಪ್ಯಾಕ್ಟ್ ಪ್ಲೇಯರ್ ಆಗುವ ಸಾಧ್ಯತೆ ಇದೆ.

ಗುಜರಾತ್​ನಲ್ಲಿ ಅಲ್ಜಾರಿ ಜೋಸೆಫ್ ಮತ್ತು ಮೊಹಮ್ಮದ್ ಶಮಿ ವಿಕೆಟ್ ಕಬಳಿಸುವ ಪ್ರಮುಖ ಬೌಲರ್​ಗಳಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಬೌಲ್​ ಮಾಡಿದ ಜೋಶುವಾ ಲಿಟಲ್ ಮೇಲೆ ಎಲ್ಲರ ಕಣ್ಣಿದೆ. ಸ್ಪಿನ್ ಬೌಲರ್ ರವಿಶ್ರೀನಿವಾಸನ್ ಸಾಯಿ ಕಿಶೋರ್ ಟಿ20ಯಲ್ಲಿ 5.48 ಎಕಾನಮಿ ರೇಟ್ ಬೌಲಿಂಗ್​ ಮಾಡಿ ಗಮನ ಸೆಳೆದಿದ್ದಾರೆ.

ಸಿಎಸ್​ಕೆಗೆ ಡೆವೊನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್ ಅವರು ಉತ್ತಮ ಆರಂಭ ನೀಡುವ ನಿರೀಕ್ಷೆ ಇದೆ. ಅಂಬಟಿ ರಾಯಡು ಮತ್ತು ಅಜಿಂಕ್ಯ ರಹಾನೆ ಅವರಂತಹ ಅನುಭವಿಗಳು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್​ ಮಾಡಲಿದ್ದಾರೆ. ಮೊಯಿನ್ ಅಲಿ, ಬೆನ್ ಸ್ಟೋಕ್ಸ್ ಮತ್ತು ರವೀಂದ್ರ ಜಡೇಜಾ ಧೋನಿ ತಂಡಕ್ಕೆ ಬಲವಾಗಿದ್ದಾರೆ. ಡ್ವೈನ್ ಪ್ರಿಟೋರಿಯಸ್, ದೀಪಕ್ ಚಹಾರ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಂತಹ ಬೌಲಿಂಗ್, ಆಲ್ ರೌಂಡರ್‌ಗಳ ಉಪಸ್ಥಿತಿಯು ಧೋನಿ ಪಡೆಯ ಬೋನಸ್ ಆಗಿದೆ.

ಗುಜರಾತ್ ಟೈಟಾನ್ಸ್ ತಂಡ: ಅಭಿನವ್ ಮನೋಹರ್, ಶುಭಮನ್ ಗಿಲ್, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್​), ರಶೀದ್ ಖಾನ್, ಶಿವಂ ಮಾವಿ, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ಶ್ರೀಕರ್ ಭರತ್, ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಉರ್ವಿಲ್ ಪಟೇಲ್, ವಿಜಯ್ ಶಂಕರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಓಡಿಯನ್ ಸ್ಮಿತ್, ಜಯಂತ್ ಯಾದವ್, ಜೋಶುವಾ ಲಿಟಲ್, ದರ್ಶನ್ ನಲ್ಕಂಡೆ, ನೂರ್ ಅಹ್ಮದ್, ಮೋಹಿತ್ ಶರ್ಮಾ ಮತ್ತು ಪ್ರದೀಪ್ ಸಾಂಗ್ವಾನ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್​ ಕೀಪರ್​/ ನಾಯಕ), ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಸಿಮರ್ಜೀತ್ ಸಿಂಗ್, ಅಜಿಂಕ್ಯ ರಹಾನೆ, ಸುಭ್ರಾಂಶು ಸೇನಾಪತಿ ರಶೀದ್, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಭಗತ್ ವರ್ಮಾ, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ ಮತ್ತು ಆಕಾಶ್ ಸಿಂಗ್.

ಇದನ್ನೂ ಓದಿ:IPL: ಧೋನಿಗೆ ಮೊಣಕಾಲು ಗಾಯ: ಇಂದಿನ ಪಂದ್ಯದಲ್ಲಿ ಕಣಕ್ಕಿಳೀತಾರಾ?

ABOUT THE AUTHOR

...view details