ಕರ್ನಾಟಕ

karnataka

ETV Bharat / sports

ಮೊದಲ ಗೆಲುವಿಗೆ ಕಾದಿರುವ ಆರ್​ಸಿಬಿ: ಟಾಸ್ ಗೆದ್ದ ಗುಜರಾತ್​ ಬ್ಯಾಟಿಂಗ್​ ಆಯ್ಕೆ ​

ಮೊದಲ ಗೆಲುವಿಗೆ ಎದುರು ನೋಡುತ್ತಿರುವ ಉಭಯ ತಂಡಗಳು - ಟಾಸ್​ ಗೆದ್ದು ಗುಜರಾತ್​ ಬ್ಯಾಟಿಂಗ್​ ಆಯ್ಕೆ - ಬೆಂಗಳೂರು ಬ್ಯಾಟಿಂಗ್​ನಲ್ಲಿ ಒಂದು ಬದಲಾವಣೆ

Gujarat Giants vs Royal Challengers Bangalore Women
ಮೊದಲ ಗೆಲುವಿಗೆ ಕಾಡಿರುವ ಆರ್​ಸಿಬಿ

By

Published : Mar 8, 2023, 7:20 PM IST

ಮುಂಬೈ:ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್​ ಜೈಂಟ್ಸ್​ ನಡುವೆ ಡಬ್ಲ್ಯೂಪಿಎಲ್​ನ 6ನೇ ಮುಖಾಮುಖಿ ಆಗುತ್ತಿದೆ. ಟಾಸ್​ ಗೆದ್ದ ಗುಜರಾತ್​ ನಾಯಕಿ ಸ್ನೇಹ ರಾಣ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರು ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಪೂನಂ ಖೇಮ್ನಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಗುಜರಾತ್​ ಜೈಂಟ್ಸ್​​ ಆಡುವ ತಂಡ:ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್​ ಕೀಪರ್​), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆಡುವ ತಂಡ:ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್, ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

ರಾಣಾ ನಾಯಕತ್ವ ಮುಂದುವರಿಕೆ:ಗುಜರಾತ್ ಜೈಂಟ್ಸ್​ ನಾಯಕ್ವವನ್ನು ಆಸ್ಟ್ರೇಲಿಯಾದ ಬೆತ್​ ಮೂನಿ ಅವರಿಗೆ ಕೊಡಲಾಗಿತ್ತು. ಮೊದಲ ಪಂದ್ಯಕ್ಕೂ ಮುನ್ನ ಗಾಯಗೊಂಡ ನಾಯಕಿ ಬೆತ್​ ಮೂನಿ ಬದಲಾಗಿ ರಾಣಾಗೆ ನಾಯಕತ್ವ ನೀಡಲಾಗಿತ್ತು. ಇನ್ನು, ಮೂನಿ ಚೇತರಿಸಿಕೊಳ್ಳದ ಕಾರಣ ರಾಣಾ ನಾಯಕಿಯಾಗಿ ಮುಂದುವರೆದಿದ್ದಾರೆ.

ಎರಡು ಸೋಲು ಕಂಡಿರುವ ಉಭಯ ತಂಡಗಳು:ಗುಜರಾತ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಒಂದು ಗೆಲುವನ್ನು ಕಂಡಿಲ್ಲ. ಇಂದಿನ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಚೊಚ್ಚಲ ಗೆಲುವಾಗಲಿದೆ. ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಗಲಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನ ಸೂತ್ರ ಹುಡುಕುತ್ತಿದೆ.

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಎದುರು ಗುಜರಾತ್​ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸೋಲನುಭವಿಸಿತ್ತು. ಮುಂಬೈ 143 ರನ್​ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಗುಜರಾತ್ ವೈಫಲ್ಯ ಕಂಡಿತು. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಎದುರು ಮೂರು ವಿಕೆಟ್​ಗಳ ಸೋಲು ಕಂಡಿತ್ತು. ಗುಜರಾತ್​ 169 ರನ್ ಗುರಿ ನೀಡಿತ್ತಾದರೂ ಅದನ್ನು ಕಾಪಾಡಿಕೊಳ್ಳುವಲ್ಲಿ ಸೋತಿತು.

ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್​ ಎದುರಿನ ಪಂದ್ಯದಲ್ಲಿ ಬೃಹತ್​ ರನ್​ ಬೆನ್ನು ಹತ್ತುವಲ್ಲಿ ಎಡವಿತು. ಟಾಸ್​ ಸೋತು ಬ್ಯಾಟ್​ ಮಾಡಿದ್ದ ಡೆಲ್ಲಿ ತಂಡ 2 ವಿಕೆಟ್​ ನಷ್ಟದಲ್ಲಿ 223 ರನ್​ ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ ಆರ್​ಸಿಬಿ 163 ರನ್ ಗಳಿಸಿತು. 60 ರನ್​ನಿಂದ ಸೋಲನುಭವಿಸಿತು. ಮುಂಬೈ ಎದುರಿನ ಎರಡನೇ ಪಂದ್ಯದಲ್ಲಿ ಟಾಸ್ ​ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದ ಮಂಧಾನ ಬೃಹತ್​ ರನ್​ ಕಲೆಹಾಕುವಲ್ಲಿ ವಿಫಲರಾಗಿ 9 ವಿಕೆಟ್​ನ ಸೋಲು ಕಂಡಿದ್ದರು.

ಪಿಚ್​ ಲಾಭ ಪಡೆದುಕೊಳ್ಳುತ್ತಾ ಆರ್​ಸಿಬಿ:ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮೂರನೇ ಪಂದ್ಯ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್​ಗೆದ್ದು ಬೌಲಿಂಗ್​ ಮತ್ತು ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಿ ಸೋಲನುಭವಿಸಿದೆ. ಇದರಿಂದ ಪಿಚ್​ನ ಗುಣಾವಗುಣ ಅರಿತ ತಂಡ ಇಂದು ಗೆಲುವಿನ ತಂತ್ರ ಹೇಗೆ ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಉಚಿತ ಪ್ರವೇಶ: ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷದ ಪ್ರಯುಕ್ತ ಇಂದು ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ಅವಕಾಶವನ್ನು ವುಮೆನ್ಸ್​ ಪ್ರೀಮಿಯರ್​ ಲೀಗ್​ನಿಂದ ಮಾಡಿಕೊಡಲಾಗಿದೆ. ಈ ಬಗ್ಗೆ ಮುಂಬೈ ಎದುರು ಆರ್​ಸಿಬಿ ಪಂದ್ಯ ಆಡುವಾಗ ಪ್ರಕಟ ಮಾಡಲಾಗಿತ್ತು. ಅಲ್ಲದೇ, ಡಬ್ಲ್ಯೂಪಿಎಲ್​ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.

ಇದನ್ನೂ ಓದಿ:ಐಸಿಸಿ ಟೆಸ್ಟ್​ ರ್‍ಯಾಂಕಿಂಗ್​: ಅಶ್ವಿನ್​ - ಜೇಮ್ಸ್ ಆಂಡರ್ಸನ್ ಅಗ್ರಸ್ಥಾನಕ್ಕಾಗಿ ಪೈಪೋಟಿ

ABOUT THE AUTHOR

...view details