ಕರ್ನಾಟಕ

karnataka

ETV Bharat / sports

ಭವಿಷ್ಯದ ತಾರೆ ಚೇತನ್​ ಸಕಾರಿಯಾರನ್ನ 4.2 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​ - Chetan Sakariya Delhi capitals

ಒಂದೇ ವರ್ಷದಲ್ಲಿ ಒಂದು ಸಂಕಷ್ಟದ ಸರಮಾಲೆ ಮತ್ತೊಂದು ಕಡೆ ಕ್ರಿಕೆಟ್​ ಜೀವನದಲ್ಲಿ ಯಶಸ್ಸು ಪಡೆದ ಸಕಾರಿಯಾ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್​ ನೇತೃತ್ವದ ಭಾರತ ತಂಡದ ಭಾಗವಾಗಿದ್ದರು, ಇದೀಗ ತಮ್ಮ 2ನೇ ಆವೃತ್ತಿಯಲ್ಲೇ 4.2 ಕೋಟಿ ರೂಗಳಿಗೆ ಮಾರಾಟವಾಗಿದ್ದಾರೆ.

Chetan Sakariya of Bhavnagar Goes to Delhi Capitals for Rs 4.2 Crore
ಚೇತನ್​ ಸಕಾರಿಯಾ

By

Published : Feb 14, 2022, 4:56 PM IST

ಮುಂಬೈ: ಒಂದೇ ವರ್ಷದಲ್ಲಿ ತಮ್ಮ - ತಂದೆಯನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿದ್ದ ಯುವ ಬೌಲರ್​ ಚೇತನ್​ ಸಕಾರಿಯಾ ಒಂದೇ ವರ್ಷದಲ್ಲಿ ಐಪಿಎಲ್​, ಭಾರತ ಟಿ-20 ಮತ್ತು ಏಕದಿನ ತಂಡಕ್ಕೂ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದರು. 2021ರಲ್ಲಿ 1.2 ಕೋಟಿ ರೂ ಪಡೆದಿದ್ದ ಎಡಗೈ ವೇಗಿಯನ್ನ 2022ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 4.2 ಕೋಟಿ ರೂಗಳಿಗೆ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿದೆ.

ಐಪಿಎಲ್​ನಲ್ಲಿ ಆಡುವ ಅವಕಾಶಕ್ಕಾಗಿ ಲಕ್ಷಾಂತರ ಯುವ ಕ್ರಿಕೆಟಿಗರು ಸಾಲು ಸಾಲಾಗಿ ಕಾದು ನಿಂತಿದ್ದಾರೆ. ಇಂತಹದ್ದೇ ಕನಸಿನ್ನಿಟ್ಟುಕೊಂಡಿದ್ದ ಚೇತನ್​ ಸಕಾರಿಯಾ ಐಪಿಎಲ್​ಗೂ ಬರುವ ಮುನ್ನ ದೊಡ್ಡ ದುರಂತವನ್ನೇ ಎದುರಿಸಿ ಬಂದಿದ್ದರು. 2021ರ ಸಯ್ಯದ್ ಮುಸ್ತಾಕ್​ ಟಿ-20 ವೇಳೆ ತಮ್ಮನನ್ನು ಕಳೆದುಕೊಂಡಿದ್ದರು.

ಆದರೆ, ಈತನ ಕ್ರಿಕೆಟ್​ ಜೀವನ ಹಾಳಗಬಾರದೆಂದು ಲಾರಿ ಡ್ರೈವರ್​ ಆಗಿದ್ದ ತಂದೆ ಮತ್ತು ಟೈಲರಿಂಗ್ ಮಾಡುತ್ತಿದ್ದ ತಾಯಿ ಸಕಾರಿಯಾ ಅವರಿಂದ 10 ದಿನಗಳ ಕಾಲ 2ನೇ ಮಗನ ಸಾವಿನ ಸುದ್ದಿಯನ್ನು ಮುಚ್ಚಿಟ್ಟಿದ್ದರು. ಬಡತನದಲ್ಲಿ ಕ್ರಿಕೆಟ್​ ಆಟವನ್ನು ಒಲಿಸಿಕೊಂಡಿದ್ದ ಈತನನ್ನು ದೊಡ್ಡ ಮಟ್ಟದಲ್ಲಿ ನೋಡುವ ಅವರ ಕನಸು ಮನೆಯಲ್ಲಿ ಇಂತಹ ದುರಂತವನ್ನು ಮುಚ್ಚಿಡುವ ಮಟ್ಟಿಗೆ ಅವರನ್ನು ಕಲ್ಲು ಹೃದಯವಂತರನ್ನಾಗಿಸಿತ್ತು.

ಆದರೆ, ತಮ್ಮನ ಜೊತೆ ತುಂಬಾ ಅನ್ಯೋನ್ಯವಾಗಿದ್ದ ಸಕಾರಿಯಾ ಈ ಘಟನೆ ತಿಳಿದು ಆಘಾತಕ್ಕೊಳಗಾದರು. ಒಂದು ವಾರ ಊಟ ತ್ಯಜಿಸಿ, ಯಾರೊಂದಿಗೂ ಮಾತನಾಡದೇ ಒಂಟಿಯಾಗಿ ಕಾಲ ಕಳೆದಿದ್ದರೆಂದು ಅವರ ತಾಯಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಇನ್ನು ಮೊದಲ ಐಪಿಎಲ್​ನಲ್ಲಿ ಆಡಿದ ಖುಷಿಯಲ್ಲಿದ್ದ ಯುವ ಆಟಗಾರನಿಗೆ ತಮ್ಮನ ಸಾವು ಮರೆತು ಕುಟುಂಬದೊಡನೆ ಸಂತೋಷದಲ್ಲಿ ಇರಬೇಕೆನ್ನುವಷ್ಟರಲ್ಲೇ ತಂದೆ ಕೊರೊನಾಗೆ ಬಲಿಯಾದರು.

ಒಂದೇ ವರ್ಷದಲ್ಲಿ ಒಂದು ಸಂಕಷ್ಟದ ಸರಮಾಲೆ ಮತ್ತೊಂದು ಕಡೆ ಕ್ರಿಕೆಟ್​ ಜೀವನದಲ್ಲಿ ಯಶಸ್ಸು ಪಡೆದ ಸಕಾರಿಯಾ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್​ ನೇತೃತ್ವದ ಭಾರತ ತಂಡದ ಭಾಗವಾದರು, ಇದೀಗ ತಮ್ಮ 2ನೇ ಆವೃತ್ತಿಯಲ್ಲೇ 4.2 ಕೋಟಿ ರೂಗಳಿಗೆ ಮಾರಾಟವಾಗಿದ್ದಾರೆ. ತಮ್ಮ ನೋವು ಕ್ರಿಕೆಟ್​ ಆಡದ ಮೂಲಕ ಮರೆಯುತ್ತಿರುವ ಯುವ ಆಟಗಾರ ಈ ಬಾರಿ ದುಬಾರಿ ಮೊತ್ತ ಪಡೆದಿದ್ದು, ಡೆಲ್ಲಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡದಲ್ಲಿ ಅವಕಾಶ ಪಡೆಯಲಿ ಎಂಬುವುದು ಕ್ರೀಡಾಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ:ಐಪಿಎಲ್​ನ 10 ತಂಡಗಳಿಗೆ ಖರ್ಚಾದ 553 ಕೋಟಿ ರೂ.ಗಳಲ್ಲಿ 16 ಕನ್ನಡಿಗರಿಗೆ ಸಿಕ್ತು 66.6 ಕೋಟಿ ರೂ!

ABOUT THE AUTHOR

...view details