ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ಇತಿಹಾಸ ದಾಖಲಾಗುವುದು, ಬ್ರೇಕ್ ಆಗುವುದು ಸರ್ವೆ ಸಾಮಾನ್ಯ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಈ ಹಿಂದೆ ನಿರ್ಮಾಣಗೊಳ್ಳದ ಹಾಗೂ ಮುಂದಿನ ದಿನಮಾನಗಳಲ್ಲಿ ಅತಿ ಸುಲಭವಾಗಿ ಬ್ರೇಕ್ ಮಾಡಲು ಸಾಧ್ಯವಾಗದಂತಹ ರೆಕಾರ್ಡ್ ಸೃಷ್ಟಿಯಾಗುತ್ತವೆ. ಸದ್ಯ ಅಂತಹದೊಂದು ವಿನೂತನ ಸಾಧನೆ ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಮೂಡಿ ಬಂದಿದೆ.
ಕ್ರಿಕೆಟ್ನಲ್ಲೊಂದು ವಿನೂತನ ರೆಕಾರ್ಡ್.. ಇನ್ನಿಂಗ್ಸ್ ಒಂದರಲ್ಲಿ 410ರನ್ ಗಳಿಸಿದ ಪ್ಲೇಯರ್! - ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್
ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಬ್ಯಾಟರ್ನೊಬ್ಬ ಬರೋಬ್ಬರಿ ಅಜೇಯ 410ರನ್ಗಳಿಕೆ ಮಾಡಿದ್ದಾರೆ. 21ನೇ ಶತಮಾನದಲ್ಲಿ ಬ್ಯಾಟರ್ನಿಂದ ಸಿಡಿದಿರುವ ಅತಿದೊಡ್ಡ ವೈಯಕ್ತಿಕ ಸ್ಕೋರ್ ಇದಾಗಿದೆ.
ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಲೀಸೆಸ್ಟರ್ಶೈರ್ ತಂಡದ ವಿರುದ್ಧ ಸ್ಯಾಮ್ ನಾರ್ಥ್ ಇನ್ನಿಂಗ್ಸ್ವೊಂದರಲ್ಲಿ ಅಜೇಯ 410ರನ್ಗಳಿಕೆ ಮಾಡಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಒಂಬತ್ತನೇ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಆಗಿದೆ. ಜೊತೆಗೆ 21ನೇ ಶತಮಾನದಲ್ಲಿ ಮೂಡಿ ಬಂದಿರುವ ಗರಿಷ್ಠ ಸ್ಕೋರ್ ಆಗಿದೆ.
ಈ ಹಿಂದೆ 1994ರಲ್ಲಿ ಡರ್ಹಾಮ್ ವಿರುದ್ಧ ವಾರ್ವಿಕ್ಷೈರ್ ಪರ ಬ್ಯಾಟ್ ಬೀಸಿದ್ದ ಬ್ರಿಯಾನ್ ಲಾರಾ ಔಟಾಗದೇ 501ರನ್ಗಳಿಸಿದ್ದರು. ಪ್ರಥಮ ದರ್ಜೆ ಪಂದ್ಯದಲ್ಲಿ ನಿರ್ಮಾಣಗೊಂಡಿರುವ ಸಾರ್ವಕಾಲಿಕ ದಾಖಲೆಯಾಗಿದೆ. ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸದ್ಯ ಗ್ಲಾಮೊರ್ಗಾನ್ ತಂಡ 5 ವಿಕೆಟ್ನಷ್ಟಕ್ಕೆ 795ರನ್ಗಳಿಕೆ ಮಾಡಿ, ಡಿಕ್ಲೇರ್ ಮಾಡಿಕೊಂಡಿದೆ.