ದುಬೈ:ಶುಬ್ಮನ್ ಗಿಲ್ ಅವರ ಜವಾಬ್ದಾರಿಯುವ ಅರ್ಧಶತಕ ಮತ್ತು ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಪ್ರಯಾಸದ ಜಯ ಸಾಧಿಸಿ ಪ್ಲೇ ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 115ರನ್ಗಳಿಸಿತ್ತು. ವಿಲಿಯಮ್ಸನ್ 26, ಅಬ್ದುಲ್ ಸಮದ್ 25 ಮತ್ತು ಪ್ರಿಯಂ ಗರ್ಗ್ 21 ರನ್ಗಳಿಸಿದ್ದರು.
ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.