ಬೆಂಗಳೂರು:ಕಳೆದ ಐಪಿಎಲ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾನು ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಿದ್ದು, ನನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು ಎಂದು ವೇಗಿ ಹರ್ಷಲ್ ಪಟೇಲ್ ಹೇಳಿದ್ದಾರೆ.
ಹರ್ಷಲ್ ಪಟೇಲ್ 2020ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. 2021 ಆವೃತ್ತಿ ವೇಳೆ ಡೆಲ್ಲಿ ಅವರನ್ನು ಆರ್ಸಿಬಿಗೆ ವರ್ಗಾವಣೆ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಪಟೇಲ್ 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು.
ನಾನು ನನ್ನ ಐಪಿಎಲ್ ಕೆರಿಯರ್ನ ಆರಂಭದ 6 ವರ್ಷಗಳನ್ನು ಆರ್ಸಿಬಿಯಲ್ಲೇ ಕಳೆದಿದ್ದೆ. ನಂತರ ಮೂರು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದೆ. ಅವರು ನನ್ನನ್ನು ಕಳೆದ ವರ್ಷ ಆರ್ಸಿಬಿಗೆ ಟ್ರೇಡ್ ಮಾಡಿದ್ದರು. ಆದರೆ, ಇದು ನನಗೆ ಆಶ್ಚರ್ಯ ತಂದಿತ್ತು. ಡೆಲ್ಲಿ ನನ್ನನ್ನು ಬ್ಯಾಕ್ಅಪ್ ಆಯ್ಕೆಯಾಗಿ ಇಟ್ಟುಕೊಳ್ಳಲಿದೆ ಎಂದು ನಾನು ಭಾವಿಸಿದ್ದೆ ಎಂದು ಹರ್ಷಲ್ ಪಟೇಲ್ ಆರ್ಸಿಬಿ ಪೋಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.