ಸೇಂಟ್ ಕಿಟ್ಸ್: 9ನೇ ಆವೃತ್ತಿ ಕೆರಿಬಿಯನ್ ಪ್ರೀಮಿಯರ್ ಲೀಗ್(CPL) ಆರಂಭಗೊಂಡಿದ್ದು, ಪಂದ್ಯವೊಂದರಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಸಿಡಿಸಿರುವ ಸಿಕ್ಸ್ವೊಂದು ನೇರವಾಗಿ ಮೈದಾನದ ಹೊರಗಿದ್ದ ಕಿಟಕಿಯ ಗ್ಲಾಸ್ಗೆ ಹೋಗಿ ಬಡೆದಿರುವ ಕಾರಣ ಅದು ಪುಡಿಪುಡಿಯಾಗಿದೆ. ಸೇಂಟ್ ಕಿಟ್ಸ್ ಹಾಗೂ ಬಾರ್ಡೊಡ್ಸ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ 21ರನ್ಗಳ ಗೆಲುವು ದಾಖಲು ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 175ರನ್ಗಳಿಕೆ ಮಾಡಿತು. ತಂಡದ ಪರ ರುದರ್ಪೋರ್ಡ್ 53ರನ್, ಬ್ರಾವೋ 47ರನ್ಗಳಿಕೆ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಗೇಲ್ ಕೇವಲ 12ರನ್ಗಳಿಕೆ ಮಾಡಿದ್ರೂ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಗಮನ ಸೆಳೆದರು. ಪಂದ್ಯದ 5ನೇ ಓವರ್ನಲ್ಲೇ ಗೇಲ್ ಭರ್ಜರಿ ಸಿಕ್ಸರ್ ಸಿಡಿಸಿದರು.