ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಬ್ಬರಿಸಿದ ಕ್ರಿಸ್ ಗೇಲ್ ಕೇವಲ 24 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿ ಸೇರಿದಂತೆ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಆರ್ಸಿಬಿ ಬೌಲರ್ ಕೈಲ್ ಜೆಮಿಸನ್ ಎಸೆದ ಓವರ್ನಲ್ಲಿ 5 ಬೌಂಡರಿ ( 4,4,4,4,0,4) ಬಾರಿಸಿ ಗಮನ ಸೆಳೆದರು. ಸತತ 4 ಬೌಂಡರಿ ಸಿಡಿಸಿದ ಗೇಲ್, ಐದನೇ ಎಸೆತ ಮಿಸ್ ಮಾಡಿದ್ದು, ಕೊನೆಯ ಎಸೆತದಲ್ಲೂ ಬೌಂಡರಿ ಸಿಡಿಸಿದರು.