ಕರ್ನಾಟಕ

karnataka

ETV Bharat / sports

ಮೋದಿ ವಿಶೇಷ ಸಂದೇಶ : ಭಾರತೀಯರಿಗೆ ಕ್ರಿಸ್​ ಗೇಲ್,ಜಾಂಟೀ ರೋಡ್ಸ್​ರಿಂದ ಗಣರಾಜ್ಯೋತ್ಸವದ ಶುಭಾಶಯ

ಮುಂಬೈ ಇಂಡಿಯನ್ಸ್​ ಮತ್ತು ಪಂಜಾಬ್​ ಕಿಂಗ್ಸ್ ತಂಡದ ಪರ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ತೊಡಗಿಸಿಕೊಂಡಿರುವುದರ ಹೊರತಾಗಿಯೂ, ಅವರು ತಮ್ಮ ಮಗಳಿಗೆ ಇಂಡಿಯಾ ಎಂದೇ ನಾಮಕರಣ ಮಾಡಿರುವುದರಿಂದ ಭಾರತೀಯ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಕೂಡ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ..

Gayle, Rhodes send Republic Day wishes
73ನೇ ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭಕೋರಿದ ಕ್ರಿಸ್ ಗೇಲ್, ಜಾಂಟಿ ರೋಡ್ಸ್​

By

Published : Jan 26, 2022, 4:08 PM IST

ನವದೆಹಲಿ :ಭಾರತದಾದ್ಯಂತ ಬುಧವಾರ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ವೆಸ್ಟ್​ ಇಂಡೀಸ್​ ಸ್ಫೋಟಕ ಬ್ಯಾಟರ್​ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್​ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಭಾರತೀಯರಿಗೆ ಶುಭ ಕೋರಿದ್ದಾರೆ. ಮತ್ತು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಸಂದೇಶ ಸ್ವೀಕರಿಸುವುದಾಗಿ ಈ ಇಬ್ಬರು ಕ್ರಿಕೆಟಿಗರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಾನು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನಃ ದೃಢೀಕರಿಸುವ ವೈಯಕ್ತಿಕ ಸಂದೇಶದಿಂದ ನಾನು ಎಚ್ಚರಗೊಂಡಿದ್ದೇನೆ.

ಯೂನಿವರ್ಸಲ್‌ ಬಾಸ್​​ನಿಂದ ಭಾರತೀಯರಿಗೆ ಅಭಿನಂದನೆಗಳು ಮತ್ತು ಪ್ರೀತಿ ಇದೆ" ಎಂದು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್​ ಗೇಲ್ ಟ್ವೀಟ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್​ ಮತ್ತು ಪಂಜಾಬ್​ ಕಿಂಗ್ಸ್ ತಂಡದ ಪರ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ತೊಡಗಿಸಿಕೊಂಡಿರುವುದರ ಹೊರತಾಗಿಯೂ, ಅವರು ತಮ್ಮ ಮಗಳಿಗೆ ಇಂಡಿಯಾ ಎಂದೇ ನಾಮಕರಣ ಮಾಡಿರುವುದರಿಂದ ಭಾರತೀಯ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಕೂಡ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

"ನಿಮ್ಮ ವಿನಮ್ರ ಮಾತುಗಳಿಗಾಗಿ ಧನ್ಯವಾದಗಳು ನರೇಂದ್ರ ಮೋದಿಜೀ. ನಾನು ಪ್ರತಿಬಾರಿ ಭಾರತಕ್ಕೆ ಭೇಟಿಯಾದಾಗಲೂ ಒಬ್ಬ ವ್ಯಕ್ತಿಯಾಗಿ ತುಂಬಾ ಬೆಳೆದಿದ್ದೇನೆ. ಭಾರತೀಯ ಜನರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನದ ಮಹತ್ವವನ್ನು ಗೌರವಿಸುವ ಮೂಲಕ, ನನ್ನ ಇಡೀ ಕುಟುಂಬ ಗಣರಾಜ್ಯೋತ್ಸವವನ್ನು ಭಾರತದಾದ್ಯಂತ ಆಚರಿಸುತ್ತದೆ. ಜೈಹಿಂದ್" ಎಂದು ಜಾಂಟಿ ರೋಡ್ಸ್ ಪ್ರಧಾನಿ ಮೋದಿ ಕಳುಹಿಸಿರುವ ಸಂದೇಶದ ಪ್ರತಿಯೊಂದಿಗೆ ಟ್ವೀಟ್​ ಮಾಡಿ ಶುಭ ಕೋರಿದ್ದಾರೆ.

ತಮ್ಮ ಪತ್ರದಲ್ಲಿ ಪಿಎಂ ಮೋದಿ ಅವರು ಈ ವರ್ಷದ ಗಣರಾಜ್ಯೋತ್ಸವದ ಪ್ರಸ್ತುತತೆಯನ್ನು ವಿವರಿಸಿದರು ಮತ್ತು ರೋಡ್ಸ್ ರಾಷ್ಟ್ರದೊಂದಿಗೆ ‘ಆಪ್ತವಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ’ ಆಶಿಸಿದ್ದಾರೆ.

ರೋಡ್​ ಶೇರ್​ ಮಾಡಿಕೊಂಡಿರುವ ಪತ್ರದಲ್ಲಿ ಮೋದಿ ಅವರು," ಈ ವರ್ಷದ ಜನವರಿ 26 ಭಾರತೀಯರಿಗೆ ಹೆಚ್ಚು ವಿಶೇಷವಾಗಿದೆ. ಏಕೆಂದರೆ, ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಪೂರೈಸುವ ಸಮಯದಲ್ಲಿ ಇದು ನಡೆಯುತ್ತಿದೆ.

ಹೀಗಾಗಿ, ನಾನು ನಿಮಗೆ ಮತ್ತು ಭಾರತದ ಇತರ ಕೆಲವು ಸ್ನೇಹಿತರಿಗೆ ಸಂದೇಶ ಬರೆಯಲು ನಿರ್ಧರಿಸಿದೆ. ಭಾರತದ ಬಗ್ಗೆ ನಿಮ್ಮ ಪ್ರೀತಿಗೆ ಕೃತಜ್ಞತೆಯ ಭಾವನೆ ಮತ್ತು ನೀವು ನಮ್ಮ ದೇಶ ಮತ್ತು ಜನರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೀರೆಂಬ ಭರವಸೆ ಇದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ದೇವೇಂದ್ರ ಜಝಾರಿಯಾಗೆ ಪದ್ಮಭೂಷಣ.. ನೀರಜ್ ಚೋಪ್ರಾ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಗರಿ

ABOUT THE AUTHOR

...view details